ಭೂಮಿಯ ಮೇಲಿದ್ದ ಅದೆಷ್ಟೋ ಜೀವಿಗಳು ವಿನಾಶದ ಅಂಚಿಗೆ ತಲುಪಿ ಬಿಟ್ಟಿವೆ. ಅದರಲ್ಲಿ ಬೆಸ್ಟ್ ಎಗ್ಸಾಂಪಲ್ ಅಂದ್ರೆ ಡೈನೋಸಾರ್. ಈ ಡೈನೋಸಾರ್ನಂತೆಯೇ ಅದೆಷ್ಟೋ ಜೀವಿಗಳು, ಅಳಿದು ಹೋಗಿವೆ.
ಇನ್ನೂ ಕೆಲ ಪ್ರಾಣಿಗಳಿವೆ ಈಗ ಅವುಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿ ಹೋಗಿವೆ. ಅವುಗಳನ್ನ ರಕ್ಷಿಸದೇ ಹೋದರೆ, ಮುಂದಿನ ದಿನಗಳಲ್ಲಿ ಕಥೆಗಳಲ್ಲಿ ಇಲ್ಲಾ ಹಳೆಯ ವಿಡಿಯೋಗಳಲ್ಲಿ ನೋಡ್ಬಕಾಗುತ್ತೆ ಅಷ್ಟೆ. ಇಂಥಾ ಪ್ರಾಣಿಗಳಲ್ಲಿ ಸಿಂಹ ಬಾಲದ ಸಿಂಗಳಿಕ. ನೋಡಲು ಸ್ವಲ್ಪ ಕೋತಿಗಳಂತೆ ಇದ್ದರೂ ಇದು ಕೋತಿ ಅಲ್ಲ.
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು, ಇವರು ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಸಿಂಹ ಬಾಲ ಸಿಂಗಳಿಕ ಹೆಸರಿನ ಪ್ರಾಣಿಯ ಈ ವಿಡಿಯೋವನ್ನ ಶೇರ್ ಮಾಡಿಕೊಂಡಿದ್ದಾರೆ. ಮತ್ತು ಅದಕ್ಕೆ ಕ್ಯಾಪ್ಷನ್ನಲ್ಲಿ “ ಒಗಟು, ಆಶ್ಚರ್ಯಕರ, ಮತ್ತು ಸ್ವಲ್ಪ ನಿಗೂಢ. ಸಿಂಹ ಬಾಲದ ಮಕಾಕ್ಗಳು (ಕೋತಿಗಳು) ಪಶ್ಚಿಮ ಘಟ್ಟಗಳಲ್ಲಿ ನೋಡಬಹುದಾಗಿದೆ. ಅವುಗಳ ಸಂಖ್ಯೆ ಈಗ ತೀರಾ ಕಡಿಮೆ. ಅವುಗಳು ಅಳಿಯದಂತೆ ರಕ್ಷಣೆ ಮಾಡಬೇಕಾಗಿದೆ. ಈ ದೃಶ್ಯ ಅಪರೂಪದಲ್ಲೇ ಅಪರೂಪದ್ದಾಗಿದೆ. ಇದು ಸೆಂಥಿಲ್ ನಟರಾಜನ್ ಸೆರೆ ಹಿಡಿದಿರುವ ದೃಶ್ಯವಾಗಿದೆ.“ ಎಂದಿದ್ದಾರೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ನೀವು ಗಮನಿಸುವ ಹಾಗೆ, ಮರದ ಮೇಲೆ ಕುಳಿತಿರುವ ಈ ಪ್ರಾಣಿ, ಇದು ನೋಡೋದಕ್ಕೆ ಥೇಟ್ ಕೋತಿಯಂತಿದೆ. ಆದರೆ ಮುಖದ ಸುತ್ತ ಸಿಂಹದಂತೆ ಬಿಳಿಕೂದಲು ತುಂಬಿಕೊಂಡಿದೆ. ಮತ್ತುಇದರ ದೇಹದ ಭಾಗ ಕಪ್ಪಾಗಿದ್ದು, ಇದರ ಬಾಲ ತುಂಬಾನೇ ಉದ್ದವಾಗಿದೆ. ಇದಕ್ಕೆ ಸಿಂಹದ ಹೋಲಿಕೆ ಇದ್ದರಿಂದ ಇದಕ್ಕೆ ಸಿಂಗಳಿಕ ಎಂದು ಕರೆಯುತ್ತಾರೆ. ಇವುಗಳ ಆಯಸ್ಸು ಅಬ್ಬಬ್ಬಾ ಅಂದ್ರೆ 20-30ವರ್ಷ.
ಈ ಸಿಂಗಳಿಕನ ವಿಡಿಯೋ ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇವುಗಳ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಕೆಲವರು ಇಂಥಾ ಪ್ರಾಣಿ ಇದೆ ಅನ್ನೊದೇ ನಮಗೆ ಗೊತ್ತಿರಲಿಲ್ಲ ಅಂತ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.