ವಿಚ್ಚೇದನಕ್ಕೆ ಸಹಿ ಮಾಡಿದ ವಿಡಿಯೋ ಹಂಚಿಕೊಂಡ ಮಹಿಳೆ; ನೆಟ್ಟಿಗರ ಪರ – ವಿರೋಧದ ಪ್ರತಿಕ್ರಿಯೆ 02-12-2024 12:24PM IST / No Comments / Posted In: Latest News, India, Live News ವಿಚ್ಛೇದನ ಪತ್ರಕ್ಕೆ ಸಹಿ ಹಾಕುವುದರಿಂದ ಹಿಡಿದು ಸ್ವಂತ ಕಾರು ಖರೀದಿಸುವವರೆಗಿನ ತನ್ನ ಪಯಣವನ್ನು ಮಹಿಳೆಯೊಬ್ಬರು ಪ್ರದರ್ಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವರು ಮಹಿಳೆಯನ್ನು “ಗೋಲ್ಡ್ ಡಿಗ್ಗರ್” ಎಂದು ಕರೆಯುತ್ತಿದ್ದು, ಆಕೆ ಇಂದಿನ ಮಹಿಳೆಯರಿಗೆ ವಿಷಕಾರಿ ಸಂದೇಶ ರವಾನಿಸುತ್ತಿದ್ದಾಳೆ ಎಂದು ಕಿಡಿ ಕಾರಿದ್ದಾರೆ. ಮೊದಲು ಶ್ರೀಮಂತನನ್ನು ಮದುವೆಯಾಗಿ ನಂತರ ಮಗುವನ್ನು ಪಡೆದು ವಿಚ್ಛೇದನ ನೀಡಿದ್ದಾಳೆ ಎಂದು ಕೆಲ ನೆಟಿಜನ್‌ಗಳು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಆಕೆಯ ಪರವಾಗಿಯೂ ಪ್ರತಿಕ್ರಿಯೆ ಬಂದಿದ್ದು, ಕೆಟ್ಟ ಕಮೆಂಟ್ ಗಳು ಪಕ್ಷಪಾತ ಮತ್ತು ಸ್ತ್ರೀದ್ವೇಷ ಮಾಡಲಾಗುತ್ತಿದೆ ಎಂದಿದ್ದಾರೆ. Modern day #feminist – Marry someone rich. Have a kid. Divorce. Seek alimony. Enjoy life. Give advice on insta. pic.twitter.com/2ObIHFBzwR — ShoneeKapoor (@ShoneeKapoor) November 28, 2024