alex Certify ಅಚ್ಚರಿ ಹುಟ್ಟಿಸುತ್ತೆ ಪ್ರೇಮಿಯಿಂದ ಮೋಸ ಹೋದ್ಮೇಲೆ ಈ ಮಾಡೆಲ್ ತೆಗೆದುಕೊಂಡ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿ ಹುಟ್ಟಿಸುತ್ತೆ ಪ್ರೇಮಿಯಿಂದ ಮೋಸ ಹೋದ್ಮೇಲೆ ಈ ಮಾಡೆಲ್ ತೆಗೆದುಕೊಂಡ ನಿರ್ಧಾರ

ನಮ್ಮ ಸಂಗಾತಿ, ನಮಗೆ ನಿಷ್ಠರಾಗಿರಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಕೆಲವೊಮ್ಮೆ, ಅತಿಯಾಗಿ ಪ್ರೀತಿಸಿದ ವ್ಯಕ್ತಿ ನಮಗೆ ಮೋಸ ಮಾಡಿದಾಗ ಮನಸ್ಸು ಮುರಿಯುತ್ತದೆ. ಪ್ರೀತಿ ಮೇಲಿದ್ದ ನಂಬಿಕೆ ಮಾಯವಾಗುತ್ತದೆ. ಪುರುಷರ ಮೋಸಕ್ಕೆ ಬೇಸತ್ತ ಬ್ರೆಜಿಲ್ ಮಾಡೆಲ್ ಒಬ್ಬಳು, ವಿಚಿತ್ರ ನಿರ್ಣಯ ತೆಗೆದುಕೊಂಡಿದ್ದಾಳೆ.

ಬ್ರೆಜಿಲ್‌ನ ಸಾವೊ ಪಾಲೊದ 33 ವರ್ಷದ ಮಾಡೆಲ್ ಕ್ರಿಸ್ ಗಲೆರಾಳ ನಿರ್ಧಾರ ವಿಚಿತ್ರವಾಗಿದೆ. ಬಾಯ್ ಫ್ರೆಂಡ್ ಮೋಸ ಗೊತ್ತಾಗ್ತಿದ್ದಂತೆ ಸಂಬಂಧದಿಂದ ಹೊರ ಬಂದ ಕ್ರಿಸ್, ಒಂಟಿಯಾಗಿ ವಾಸ ಶುರು ಮಾಡಿದ್ದಳು. ಆರಂಭದಲ್ಲಿ ಆಕೆಗೆ ಒಂಟಿ ಜೀವನ ಕಷ್ಟವಾಗಿತ್ತು. ಬೇರೆ ಸಂಬಂಧದ ಹುಡುಕಾಟ ನಡೆಸಿದ್ದಳು. ಆದ್ರೆ ಕೆಲ ದಿನಗಳ ನಂತ್ರ ಆಕೆಯಲ್ಲಿ ದೊಡ್ಡ ಬದಲಾವಣೆಯಾಗಿತ್ತು. ತನಗೆ ಬೇರೆಯವರ ಅಗತ್ಯವಿಲ್ಲ. ನಾನು ಸಮರ್ಥನಾಗಿದ್ದೇನೆ ಎಂಬುದು ಅರಿವಿಗೆ ಬರ್ತಿದ್ದಂತೆ ಕ್ರಿಸ್ ಮದುವೆಯಾಗಲು ನಿರ್ಧರಿಸಿದಳು.

ಕ್ರಿಸ್ ಮದುವೆಯಾಗಿದ್ದು ಬೇರೆ ಯಾರನ್ನೋ ಅಲ್ಲ. ತನ್ನನ್ನೇ ತಾನು ಮದುವೆಯಾಗಿದ್ದಾಳೆ. ಚರ್ಚ್ ನಲ್ಲಿ ಕ್ರಿಸ್, ಮದುವೆಯಾಗಿದ್ದಾಳೆ. ಆಕೆ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಆಕೆ ಫೋಟೋ ವೈರಲ್ ಆಗ್ತಿದ್ದಂತೆ ಅನೇಕ ಪುರುಷರು ಆಕೆಗೆ ಪ್ರಪೋಸ್ ಮಾಡಿದ್ದಾರಂತೆ. ಮದುವೆಯಾಗುವಂತೆ ಕೇಳಿದ್ದಾರಂತೆ. ಅರೇಬಿಯಾದ ಶೇಖ್ ಎಂಬಾತ ಆಕೆ ಮದುವೆಯಾಗುವ ಆಫರ್ ನೀಡಿದ್ದನಂತೆ. ನಿನ್ನನ್ನು ವಿಚ್ಛೇದನ ಮಾಡಿ ನನ್ನ ಮದುವೆಯಾಗು. ನಾನು ವರದಕ್ಷಿಣೆ ರೂಪದಲ್ಲಿ ನಿನಗೆ 3 ಕೋಟಿ ರೂಪಾಯಿ ನೀಡುತ್ತೇನೆಂದು ಆತ ಹೇಳಿದ್ದಾನಂತೆ. ಇದಕ್ಕೆ ಕ್ರಿಸ್ ಸರಿಯಾದ ಉತ್ತರ ನೀಡಿದ್ದಾಳೆ. ಅಪರಿಚಿತ ವ್ಯಕ್ತಿ ಹಾಗೂ ಆತನ ಹಣಕ್ಕೆ ನಾನು ಮಾರು ಹೋಗುವುದಿಲ್ಲವೆಂದು ಆಕೆ ಹೇಳಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...