ಹಿರಿಯ ನಟ ಸತೀಶ್ ಕೌಶಿಕ್ ಅವರು ಇದೇ 9ರಂದು ನಿಧನರಾದರು. ನಟ ದೆಹಲಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾದರು. ಹಲವಾರು ಗಣ್ಯರು ನಟನಿಗೆ ಅಂತಿಮ ನಮನ ಸಲ್ಲಿಸಿದರು.
ಈ ಕಲಾವಿದನ ನಿಧನಕ್ಕೆ ಹಲವು ಕಲಾವಿದರೂ ತಮ್ಮದೇ ಆದ ರೀತಿಯಲ್ಲಿ ಸಂತಾಪ ಸೂಚಿಸಿದ್ದಾರೆ. ಅವರಲ್ಲಿ ಬಿಹಾರದ ಗಾಯಕ ಅಮರಜೀತ್ ಜೈಕರ್ ಅವರು ಹಾಡಿನ ಮೂಲಕ ಸಂತಾಪ ಸೂಚಿಸಿದ್ದು, ಅದೀಗ ಭಾರಿ ವೈರಲ್ ಆಗುತ್ತಿದೆ.
ಸತೀಶ್ ಕೌಶಿಕ್ ಅವರ ದಿಲ್ ದೇ ದಿಯಾ ಹೈ ಹಾಡಿನಿಂದ ರಾತ್ರೋರಾತ್ರಿ ಅವರು ಫೇಮಸ್ ಆಗಿದ್ದರು. ಈ ಹಾಡನ್ನು ಈಗ ಹಲವರು ಹಾಡುವ ಮೂಲಕ ಗೌರವ ಸಲ್ಲಿಸುತ್ತಿದ್ದಾರೆ. ಸತೀಶ್ ಕೌಶಿಕ್ ಅವರ ಇನ್ನೊಂದು ಖ್ಯಾತ ಹಾಡು ಚಿಟ್ಟಿ ನಾ ಕೋಯಿ ಸಂದೇಶ್ ಅನ್ನು ಅಮರಜೀತ್ ಜೈಕರ್ ಹಾಡುವ ಮೂಲಕ ಕಲಾವಿದನಿಗೆ ಗೌರವ ಸಲ್ಲಿಸಿದ್ದಾರೆ. ಇವರ ಭಾವಪೂರ್ಣ ಹಾಡಿಗೆ ನೆಟ್ಟಿಗರು ಮನಸೋತಿದ್ದಾರೆ. ಅಮರ್ಜೀತ್ ಅವರು ಹಾಡಿದ್ದ ಈ ಹಾಡು 1998 ರ ದುಷ್ಮನ್ ಚಲನಚಿತ್ರದ್ದು. ಇದರಲ್ಲಿ ಕಾಜೋಲ್, ಸಂಜಯ್ ದತ್ ಮತ್ತು ಅಶುತೋಷ್ ರಾಣಾ ನಟಿಸಿದ್ದಾರೆ.