ಅಮಿತಾಬ್ ಬಚ್ಚನ್ ಮತ್ತು ಶಾರುಖ್ ಖಾನ್ ಪರಸ್ಪರ ಬೀಗರಾಗ್ತಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರ್ತಿವೆ. ಬಿಗ್ ಬಿ ಮೊಮ್ಮಗ ಮತ್ತು ಶಾರುಖ್ ಖಾನ್ ಪುತ್ರಿ ಪ್ರೀತಿಸ್ತಿದ್ದಾರೆ ಎಂಬ ಮಾತು ಬಹಳ ದಿನಗಳಿಂದ ಕೇಳಿಬರ್ತಿದೆ.
ಆರ್ಚೀಸ್ ಸಹನಟರಾದ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಮತ್ತು ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಅವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಅದಕ್ಕೆ ಪುಷ್ಟಿ ನೀಡುವಂತೆ ಅವರಿಬ್ಬರ ನಡುವಿನ ಪ್ಲೈಯಿಂಗ್ ಕಿಸ್ ವಿಡಿಯೋ ಗಮನ ಸೆಳೆದಿದೆ.
ಮಂಗಳವಾರ ಶಾರುಖ್ ಖಾನ್ ಅವರ ಮಗಳು ಮತ್ತು ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಮುಂಬೈನಲ್ಲಿ ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ಗೆಳತಿ ತಾನಿಯಾ ಶ್ರಾಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ವೀಡಿಯೊದಲ್ಲಿ, ಸುಹಾನಾ ಪಾರ್ಟಿ ಸ್ಥಳದಿಂದ ಹೊರಹೋಗುವಾಗ ಅಗಸ್ತ್ಯ, ತಾನಿಯಾ ಮತ್ತು ಅಹಾನ್ ಅವರನ್ನು ಡ್ರಾಪ್ ಮಾಡಲು ಬರುತ್ತಾರೆ. ಕಾರಿನಲ್ಲಿ ಕುಳಿತುಕೊಳ್ಳುವ ಮೊದಲು ಸುಹಾನಾ ಅಗಸ್ತ್ಯನತ್ತ ಕೈ ಬೀಸುತ್ತಾಳೆ. ಅದಕ್ಕೆ ಪ್ರತಿಯಾಗಿ ಅಗಸ್ತ್ಯ ಆಕೆಗೆ ಫ್ಲೈಯಿಂಗ್ ಕಿಸ್ ನೀಡಿ ಕಾರಿನ ಬಾಗಿಲು ಮುಚ್ಚುತ್ತಾರೆ. ನಂತರ ಸುಹಾನಾ ಅಲ್ಲಿಂದ ತೆರಳುತ್ತಾರೆ.