ವ್ಯಕ್ತಿಯೊಬ್ಬ ತನ್ನ ಜೀವನ ಬಹುಕಾಲವೂ ತಪ್ಪಾದ ಹೆಸರು ಉಚ್ಚರಿಸಿ ಜೀವನ ಸಂಧ್ಯಾಕಾಲದಲ್ಲಿ ಹೆಸರಿನ ಬಗ್ಗೆ ಜ್ಞಾನೋದಯವಾಗಿದೆ.
ಅರವತ್ತೊಂದು ವರ್ಷದ ಅಲನ್ ಗ್ರೇಂಗರ್ ತನ್ನ ಜನ್ಮ ಪ್ರಮಾಣಪತ್ರವನ್ನು ನೋಡಿದ ನಂತರ ತನ್ನ ಹೆಸರನ್ನು ತನ್ನ ಜೀವನದುದ್ದಕ್ಕೂ ತಪ್ಪಾಗಿ ಬರೆಯುತ್ತಿರುವುದನ್ನು ಕಂಡುಕೊಂಡು ತಬ್ಬಿಬ್ಬಾಗಿದ್ದಾರೆ.
ಆತನ ಮೊಮ್ಮಗಳು ಮಾಯಾ ಟಿಕ್ಟಾಕ್ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಅಲನ್ ಕಂಗಾಲಾಗಿರುವುದು ಕಂಡುಬಂದಿದೆ.
‘ಅಲನ್’ ಅನ್ನು ಒಂದೇ “ಎಲ್’ ನೊಂದಿಗೆ ಉಚ್ಚರಿಸಲಾಗುತ್ತದೆ. ಆದರೆ ಅಲನ್ನ ಜನನ ಪ್ರಮಾಣಪತ್ರ ನೋಡಿದಾಗ ಅಲನ್ ತನ್ನ ಹೆಸರಿನ ಎರಡು “ಎಲ್’ಗಳ ಮೂಲಕ ತಪ್ಪಾದ ಕಾಗುಣಿತ ಇತ್ತು. ಇದು ಅವರ ಮನೆಯಲ್ಲಿ ಬಿಸಿಬಿಸಿ ಚರ್ಚೆಗೂ ಕಾರಣವಾಯಿತು.
ಅಲನ್ ಅವರ ಎಲ್ಲಾ ಅಧಿಕೃತ ದಾಖಲೆಗಳು, ಅವರ ಮದುವೆಯ ಪ್ರಮಾಣಪತ್ರ ಮತ್ತು ಡ್ರೆವಿಂಗ್ ಲೈಸೆನ್ಸ್ ಸೇರಿದಂತೆ ಎಲ್ಲಾ ಕಡೆ ಎರಡು “ಎಲ್’ನೊಂದಿಗೆ ತಪ್ಪು ಕಾಗುಣಿತವನ್ನು ಹೊಂದಿದೆ. ಅವನ ಜನ್ಮ ಪ್ರಮಾಣಪತ್ರವನ್ನು ಭರ್ತಿ ಮಾಡಿದವರು ತನ್ನ ಹೆಸರಿನ ತಪ್ಪು ಕಾಗುಣಿತವನ್ನು ಬರೆದಿರಬಹುದು ಎಂದು ಅಲನ್ ಹೇಳಿಕೊಂಡಿದ್ದಾರೆ.
“ನಾನು ಇದನ್ನು ನಂಬಲು ಸಾಧ್ಯವಾಗಲಿಲ್ಲ. ಜನನ ಪ್ರಮಾಣಪತ್ರದಲ್ಲಿ ಇದು ತಪ್ಪಾಗಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಹೆಸರಿನ ಎರಡು ಹಚ್ಚೆ ಹೊಂದಿದ್ದೇನೆ, ನನ್ನ ತೋಳಿನ ಮೇಲೆ ಮತ್ತು ನನ್ನ ಕೈಯಲ್ಲಿ ಒಂದು. ನಾನು ಅದನ್ನು ಬದಲಾಯಿಸಲು ಇಚ್ಛಿಸುವುದಿಲ್ಲ, ಹಾಗೆಯೇ ಈ ಹೆಸರಲ್ಲಿ ಅಂತಹ ವ್ಯತ್ಯಾಸ ಕಾಣಿಸುತ್ತಿಲ್ಲ ಎಂದಿದ್ದಾರೆ.
ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ, ಈತ ತನ್ನ ಇಡೀ ಜೀವನವಿಡೀ ತನ್ನ ಹೆಸರನ್ನು ತಪ್ಪಾಗಿ ಬರೆಯುತ್ತಿದ್ದಾನೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.