ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಅವರನ್ನು 4 ವರ್ಷ ಅಮಾನತು ಮಾಡಿ ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆ (ನಾಡಾ) ಆದೇಶಿಸಿದೆ.
ಮಾರ್ಚ್ 10, 2024 ರಂದು ರಾಷ್ಟ್ರೀಯ ತಂಡದ ಆಯ್ಕೆ ಟ್ರಯಲ್ಸ್ ಸಮಯದಲ್ಲಿ ಮೂತ್ರದ ಮಾದರಿಯನ್ನು ನೀಡಲು ನಿರಾಕರಿಸಿದ್ದಕ್ಕಾಗಿ ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆ (ನಾಡಾ) ನಾಲ್ಕು ವರ್ಷಗಳ ಅಮಾನತು ಶಿಕ್ಷೆ ವಿಧಿಸಿದೆ.
ನಾಡಾದ ಡೋಪಿಂಗ್ ವಿರೋಧಿ ನಿಯಮಗಳ ಆರ್ಟಿಕಲ್ 10.3.1 ರ ಉಲ್ಲಂಘನೆಯಿಂದ ಅಮಾನತು ಮಾಡಲಾಗಿದೆ.ನಾಡಾ ಆರಂಭದಲ್ಲಿ ಏಪ್ರಿಲ್ 23, 2024 ರಂದು ತಾತ್ಕಾಲಿಕ ಅಮಾನತು ವಿಧಿಸಿತು. ಇದರ ಬೆನ್ನಲ್ಲೇ ವಿಶ್ವ ಕುಸ್ತಿ ಆಡಳಿತ ಮಂಡಳಿ (ಯುಡಬ್ಲ್ಯೂಡಬ್ಲ್ಯೂ) ಕೂಡ ಬಜರಂಗ್ ಅವರನ್ನು ಅಮಾನತುಗೊಳಿಸಿದೆ. ತಾತ್ಕಾಲಿಕ ಅಮಾನತು ವಿರುದ್ಧ ಕುಸ್ತಿಪಟು ಯಶಸ್ವಿಯಾಗಿ ಮೇಲ್ಮನವಿ ಸಲ್ಲಿಸಿದರು, ನಾಡಾದ ಶಿಸ್ತು ವಿರೋಧಿ ಡೋಪಿಂಗ್ ಪ್ಯಾನಲ್ (ಎಡಿಡಿಪಿ) ಮೇ 31, 2024 ರಂದು ಅದನ್ನು ಹಿಂತೆಗೆದುಕೊಂಡಿತು. ನಾಡಾ ಜೂನ್ 23, 2024 ರಂದು ಔಪಚಾರಿಕ ನೋಟಿಸ್ ನೀಡಿತು. ಬಜರಂಗ್ ಅವರ ಲಿಖಿತ ಸಲ್ಲಿಕೆಗಳು ಮತ್ತು ಸೆಪ್ಟೆಂಬರ್ 20 ಮತ್ತು ಅಕ್ಟೋಬರ್ 4 ರಂದು ನಡೆದ ವಿಚಾರಣೆಗಳ ನಂತರ, ಎಡಿಡಿಪಿ ಏಪ್ರಿಲ್ 23, 2024 ರಿಂದ ನಾಲ್ಕು ವರ್ಷಗಳ ಅನರ್ಹತೆಯ ಅವಧಿಯನ್ನು ಜಾರಿಗೆ ತರಲು ತೀರ್ಪು ನೀಡಿತು.