ಶಿವಮೊಗ್ಗ : ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಜಿಲ್ಲೆಯ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಶಿಕಾರಿಪುರದಲ್ಲಿ ಮಾ.24ರಂದು ನಿಯಮ ಮೀರಿ ಬೈಕ್ ರ್ಯಾಲಿ ನಡೆಸಿದ್ದರು. ರ್ಯಾಲಿಯಲ್ಲಿ 10 ಬೈಕ್, ಒಂದು ಜೀಪ್ ಮಾತ್ರ ಬಳಸುವುದಾಗಿ ಅನುಮತಿ ಪಡೆದಿದ್ದರು. ಆದರೆ ರ್ಯಾಲಿಯಲ್ಲಿ 50ಕ್ಕೂ ಹೆಚ್ಚು ಬೈಕ್ಗಳು, 4 ಕಾರುಗಳನ್ನು ಬಳಸಲಾಗಿದ್ದು, ಚುನಾವಣಾಧಿಕಾರಿ ದೂರಿನ ಮೇರೆಗೆ ಈಶ್ವರಪ್ಪ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.