alex Certify ನಾಯಿ ಮಾಂಸ ನಿಷೇಧ ಆದೇಶ ರದ್ದುಗೊಳಿಸಿದ ಹೈಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿ ಮಾಂಸ ನಿಷೇಧ ಆದೇಶ ರದ್ದುಗೊಳಿಸಿದ ಹೈಕೋರ್ಟ್

‘ಇಷ್ಟದ ಆಹಾರ ತಿನ್ನುವ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ’ ಎಂದು ನಾಗಾಲ್ಯಾಂಡ್‌ನಲ್ಲಿ ನಾಯಿ ಮಾಂಸದ ನಿಷೇಧವನ್ನು ಗೌಹಾಟಿ ಹೈಕೋರ್ಟ್ ರದ್ದುಗೊಳಿಸಿದೆ.

ಗೌಹಾಟಿ ಹೈಕೋರ್ಟ್‌ನ ಕೊಹಿಮಾ ಪೀಠವು ರಾಜ್ಯದ ಅಂಗಡಿಗಳು, ರೆಸ್ಟೋರೆಂಟ್‌ ಗಳಲ್ಲಿ ನಾಯಿ ಮಾಂಸ ಮಾರಾಟ ಮತ್ತು ತಿನಿಸು ಬಡಿಸುವುದನ್ನು ನಿಷೇಧಿಸುವ ನಾಗಾಲ್ಯಾಂಡ್ ಸರ್ಕಾರದ ಅಧಿಸೂಚನೆ ರದ್ದುಗೊಳಿಸಿದೆ.

ರಾಜ್ಯದಲ್ಲಿ ನಾಗಾ ಸಮುದಾಯದವರು ಸೇವಿಸುವ ನಾಯಿ ಮಾಂಸ ಮಾರಾಟವನ್ನು ನಿಷೇಧಿಸುವ ಅಧಿಸೂಚನೆಯು ಜನರು ತಮ್ಮ ಆಯ್ಕೆಯ ಆಹಾರವನ್ನು ಸೇವಿಸುವ ಸ್ವಾತಂತ್ರ್ಯ ಮತ್ತು ಜೀವನಾಧಾರದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ನಾಗಾಗಳು ನಾಯಿ ಮಾಂಸವನ್ನು ಸೇವಿಸುವುದು ಸಂಸ್ಕೃತಿ, ಪದ್ಧತಿಯಾಗಿದೆ. ಅವರು ಅದನ್ನು ಔಷಧೀಯ ಗುಣಲಕ್ಷಣ ಹೊಂದಿದೆ ಎಂದು ಪರಿಗಣಿಸುತ್ತಾರೆ.

ನಾಯಿ ಮಾಂಸದ ಸೇವನೆ ನಾಗಾಗಳ ಸ್ವೀಕಾರಾರ್ಹವಾದ ರೂಢಿ. ಆಹಾರವಾಗಿ ಬಳಸುತ್ತಾರೆ. ಜನ ನಾಯಿಗಳನ್ನು ಸಾಗಿಸುವ, ನಾಯಿ ಮಾಂಸವನ್ನು ಮಾರಾಟ ಮಾಡುವ ಮೂಲಕ ತಮ್ಮ ಜೀವನೋಪಾಯವನ್ನು ಗಳಿಸಲು ಸಮರ್ಥರಾಗಿದ್ದಾರೆ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...