ಎರಡನೇ ವಿಶ್ವಯುದ್ಧ ಕಾಲದ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾದ ಘಟನೆ ಅಮೆರಿಕದ ಟೆಕ್ಸಾಸ್ ನಗರದ ಬಳಿ ನಡೆದಿದೆ. ಪೈಲಟ್ ಸೇರಿದಂತೆ ಆರು ಸಿಬ್ಬಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿಮಾನಗಳ ವೈಮಾಲಿಕ ಪ್ರದರ್ಶನದ ವೇಳೆ ಅಪಘಾತ ಸಂಭವಿಸಿದೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಪ್ರಕಾರ. ಡಲ್ಲಾಸ್ ವೈಮಾನಿಕ ಪ್ರದರ್ಶನದಲ್ಲಿ ವಿಂಟೇಜ್ ಮಿಲಿಟರಿ ವಿಮಾನಗಳು ಗಾಳಿಯಲ್ಲಿ ಡಿಕ್ಕಿ ಹೊಡೆದವು. ಬೋಯಿಂಗ್ ಬಿ-17 ಫ್ಲೈಯಿಂಗ್ ಫೋರ್ಟ್ರೆಸ್ ಮತ್ತು ಬೆಲ್ ಪಿ-63 ಕಿಂಗ್ ಕೋಬ್ರಾ ವಿಂಗ್ಸ್ ಓವರ್ ಡಲ್ಲಾಸ್ ವೈಮಾನಿಕ ಪ್ರದರ್ಶನದಲ್ಲಿ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿವೆ.
ಡಲ್ಲಾಸ್ ಎಕ್ಸಿಕ್ಯೂಟಿವ್ ಏರ್ ಪೋರ್ಟ್ ನಲ್ಲಿ ನಡೆದ ಘಟನೆಗೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ, 6 ಸಿಬ್ಬಂದಿ ಮೃತಪಟ್ಟ ಶಂಕೆ ವ್ಯಕ್ತವಾಗಿದೆ. ಡಲ್ಲಾಸ್ ಮೇಯರ್ ಎರಿಕ್ ಜಾನ್ಸನ್ ಪ್ರಕಾರ, ಅಪಘಾತದಲ್ಲಿ ಸಾವುನೋವುಗಳ ಸಂಖ್ಯೆಯನ್ನು ಇನ್ನೂ ದೃಢಪಡಿಸಲಾಗಿಲ್ಲ.
ಘರ್ಷಣೆಯ ನಂತರ ಸ್ಥಳದಲ್ಲಿ 40 ಕ್ಕೂ ಹೆಚ್ಚು ಅಗ್ನಿಶಾಮಕ ರಕ್ಷಣಾ ಘಟಕಗಳು ಇದ್ದವು ಎಂದು ಡಲ್ಲಾಸ್ ಫೈರ್-ರೆಸ್ಕ್ಯೂ ಜೇಸನ್ ಇವಾನ್ಸ್ ತಿಳಿಸಿದರು.