ತನ್ನ ಟೈಟಲ್ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ಕೃಷ್ಣ ನಡಪಾಲ್ ನಿರ್ದೇಶನದ ‘ವೇಷ’ ಸಿನಿಮಾದ ಟ್ರೈಲರ್ ಇಂದು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದ್ದು, ಮರಿ ಟೈಗರ್ ವಿನೋದ್ ಪ್ರಭಾಕರ್ ಟ್ರೈಲರ್ ಲಾಂಚ್ ಮಾಡಲಿದ್ದಾರೆ. ಈ ಕುರಿತು ಚಿತ್ರತಂಡ instagram ನಲ್ಲಿ ಹಂಚಿಕೊಂಡಿದೆ.
ರಾಘವೇಂದ್ರ ಡಿಜಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ರಾಘು, ನಿಧಿ, ಸೌಖ್ಯ ಗೌಡ, ಮಂಜು ಪಾವಗಡ, ವಾಣಿಶ್ರೀ, ಪ್ರಿಯಾಂಕ ಕಾಮತ್, ನೇಹಾ ಗೌಡ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಸುರೇಂದ್ರ ಅವರ ಸಂಕಲನವಿದ್ದು, ಉತ್ತಮ್ ಸಾರಂಗ್ ಸಂಗೀತ ಸಂಯೋಜನೆ ನೀಡಿದ್ದಾರೆ.