
ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಮರಿ ಟೈಗರ್ ವಿನೋದ್ ಪ್ರಭಾಕರ್ ಅವರ ಇಪ್ಪತೈದನೇ ಚಿತ್ರದ ಟೈಟಲ್ ರಿವಿಲ್ ಮಾಡಲಾಗಿದೆ. ಈ ಚಿತ್ರಕ್ಕೆ ‘ಬಲರಾಮನ ದಿನಗಳು’ ಎಂಬ ಹೆಸರಿಡಲಾಗಿದ್ದು, ಗೃಹ ಮಂತ್ರಿಗಳಾದ ಡಾ. ಜಿ ಪರಮೇಶ್ವರ್ ಅವರು ಈ ಶೀರ್ಷಿಕೆ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಕೆಎಂ ಚೈತನ್ಯ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರವನ್ನು ಪದ್ಮಾವತಿ ಜಯರಾಮ್ ತಮ್ಮ ಪದ್ಮಾವತಿ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಅಂಡರ್ವರ್ಲ್ಡ್ ಮಾಫಿಯಾ ಆಧಾರಿತ ಸಿನಿಮಾ ಎಂದು ಹೇಳಲಾಗಿದ್ದು, ಶೀಘ್ರದಲ್ಲೇ ಶೂಟಿಂಗ್ ಪ್ರಾರಂಭಿಸುವುದಾಗಿ ನಿರ್ದೇಶಕರು ತಮ್ಮ instagram ನಲ್ಲಿ ತಿಳಿಸಿದ್ದಾರೆ.
