ತಮ್ಮ ಆಕ್ಷನ್ ಚಿತ್ರಗಳ ಮೂಲಕವೇ ಪ್ರೇಕ್ಷಕರ ಮನೆ ಮಾತಾಗಿರುವ ಮರಿ ಟೈಗರ್ ವಿನೋದ್ ಪ್ರಭಾಕರ್ ಇಂದು ತಮ್ಮ 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ
2002 ರಲ್ಲಿ ತೆರೆ ಕಂಡ ‘ದಿಲ್’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ವಿನೋದ್ ಪ್ರಭಾಕರ್ ‘ಫಟಿಂಗ’ ‘ಮಹಾ ನಗರ’ ‘ದೇವಿ ಅಭಯಮ್’ ‘ಸರ್ಕಲ್ ರೌಡಿ’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು.
2008 ರಂದು ಬಿಡುಗಡೆಯಾಗಿದ್ದ ‘ನವಗ್ರಹ’ ಚಿತ್ರದಲ್ಲಿ ಟೋನಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಜನಪ್ರಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡರು.
‘ಮಾದೇವ’ ಹಾಗೂ ‘ಫೈಟರ್’ ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ವಿನೋದ್ ಪ್ರಭಾಕರ್ ಅವರ ಮುಂದಿನ ಚಿತ್ರಗಳ ಕುರಿತು ಇಂದು ಘೋಷಣೆ ಆಗುವ ಸಾಧ್ಯತೆ ಇದೆ. ಇಂದು ಸಾಮಾಜಿಕ ಜಾಲತಾಣದಲ್ಲಿ ವಿನೋದ್ ಪ್ರಭಾಕರ್ ಅವರ ಸ್ನೇಹಿತರಿಂದ ಹಾಗೂ ಸಿನಿಮಾ ಕಲಾವಿದರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.