ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ಫೈನಲ್‌ನಿಂದ ಅನರ್ಹಗೊಂಡ ನಂತರ ಬೆಳ್ಳಿ ಪದಕಕ್ಕಾಗಿ ಕುಸ್ತಿಪಟು ವಿನೇಶ್ ಫೋಗಟ್ ಅವರು ಸಲ್ಲಿಸಿದ್ದ ಮನವಿಯನ್ನು ಬುಧವಾರ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ(ಸಿಎಎಸ್) ತಾತ್ಕಾಲಿಕ ವಿಭಾಗವು ವಜಾಗೊಳಿಸಿದೆ.
2024 ಆಗಸ್ಟ್ 7 ರಂದು ವಿನೇಶ್ ಫೋಗಟ್ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಸಿಎಎಸ್ ತಿಳಿಸಿದೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್(ಐಒಎ) ಫೋಗಟ್ ಬೆಂಬಲಕ್ಕೆ ನಿಂತಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ. ಕುಸ್ತಿಪಟುವಿನ ಪ್ರಕರಣವನ್ನು ಸರಿಯಾಗಿ ಆಲಿಸಲು IOA ಕಾನೂನು ಆಯ್ಕೆಗಳನ್ನು ಅನ್ವೇಷಿಸುತ್ತಿದೆ. ಈ ಬಗ್ಗೆ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ಅವರು ಏಕೈಕ ಪಂಚಾಯಿತಿ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕಳೆದ ಮಂಗಳವಾರ ಫೈನಲ್‌ಗೆ ಪ್ರವೇಶಿಸಿದ ವಿನೇಶ್ ಪೋಗಟ್ 100 ಗ್ರಾಂ ಹೆಚ್ಚು ತೂಕದ ಕಾರಣ ಫೈನಲ್ ನಿಂದ ಅನರ್ಹರಾಗಿದ್ದರು.
ಕಳೆದ ಬುಧವಾರ ಸಿಎಎಸ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಕ್ಯೂಬಾದ ಕುಸ್ತಿಪಟು ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರೊಂದಿಗೆ ಜಂಟಿ ಬೆಳ್ಳಿಯನ್ನು ನೀಡಬೇಕೆಂದು ಒತ್ತಾಯಿಸಿದ್ದರು. ಅವರ ಮನವಿಯನ್ನು ಸಿಎಎಸ್ ತಿರಸ್ಕರಿಸಿದೆ. ಅನರ್ಹತೆಯ ಒಂದು ದಿನದ ನಂತರ ವಿನೇಶ್ ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದಾರೆ.