alex Certify ಸಿಎಂ, ಡಿಸಿಎಂ ಹುದ್ದೆ ಗದ್ದಲ ಹೊತ್ತಲ್ಲೇ ಬಹಿರಂಗವಾಯ್ತು ಸಚಿವ, ಶಾಸಕರ ಕಲಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ, ಡಿಸಿಎಂ ಹುದ್ದೆ ಗದ್ದಲ ಹೊತ್ತಲ್ಲೇ ಬಹಿರಂಗವಾಯ್ತು ಸಚಿವ, ಶಾಸಕರ ಕಲಹ

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆ ಗದ್ದಲ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಸಚಿವ ಮತ್ತು ಶಾಸಕರ ನಡುವಿನ ಆಂತರಿಕ ಕಲಹ ಬಹಿರಂಗವಾಗಿದೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ವಿನಯ್ ಕುಲಕರ್ಣಿ ಅವರ ಕಲಹ ಹೊರ ಬಂದಿದೆ.

ವಾಲ್ಮೀಕಿ ನಿಗಮದ ವ್ಯವಸ್ಥೆಗಿಂತ ಕೆಟ್ಟ ವ್ಯವಸ್ಥೆ KUWSDB ಯಲ್ಲಿದೆ. ಗುತ್ತಿಗೆ ನೀಡಿಕೆಯಲ್ಲಿ ಸಚಿವರಿಗೆ ಬೇಡವಾದ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ತಮಗೆ ಬೇಕಾದವರಿಗೆ ಟೆಂಡರ್ ಕೊಡುವುದು ನಡೆಯುತ್ತಿದೆ ಎಂದು ವಿನಯ್ ಕುಲಕರ್ಣಿ ಬಹಿರಂಗವಾಗಿಯೇ ಸಚಿವರ ವಿರುದ್ಧ ಗುಡುಗಿದ್ದಾರೆ.

ಇಂತಹ ದುರಾಡಳಿತವನ್ನು ಸಹಿಸುವುದಿಲ್ಲ, ಗೌರವ ಇಲ್ಲದ ಕಡೆ ಏಕೆ ಇರಬೇಕು? ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧವಿದ್ದೇನೆ ಎಂದು ಹೇಳಿದ್ದಾರೆ. ಮಂಡಳಿಯ ಗುತ್ತಿಗೆ ಪಡೆಯುವ ಎಲ್ಲಾ ಕಂಪನಿಗಳ ಬಗ್ಗೆ ತನಿಖೆಯಾಗಬೇಕು. ಗೋಲ್ಮಾಲ್ ಮಾಡಿರುವ ಕಂಪನಿಗಳನ್ನು ಕಪ್ಪುಪಟ್ಟಿಗೆ ಹಾಕಲು ತನಿಖೆ ನಡೆಸುವಂತೆ ನಾನು ಪತ್ರ ನೀಡಿ ಎರಡೂವರೆ ತಿಂಗಳಾಗಿದೆ. ಇಂತಹ 10 ರಿಂದ 15 ಕಂಪನಿಗಳಿದ್ದು, ಮಂತ್ರಿಗಳಿಗೆ ಬೇಡವಾದ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವುದು, ಬೇಕಾದ ಕಂಪನಿಗಳಿಗೆ ಟೆಂಡರ್ ನೀಡುವುದು ಆಗಬಾರದು ಎಂದು ಹೇಳಿದ್ದಾರೆ.

ಮಂಡಳಿಯ ದುರಾಡಳಿತವನ್ನು ಸಹಿಸಿಕೊಳ್ಳುವುದಿಲ್ಲ. ಸಚಿವರೇನು ಮೇಲಿಂದ ಬಂದಿಲ್ಲ. ಸಚಿವರಾಗುವ ಮೊದಲು ಅವರು ಶಾಸಕರೇ ಅಲ್ಲವೇ? KUWSDB ಯಲ್ಲಿನ ದುರಾಡಳಿತಕ್ಕೆ ಸಂಬಂಧಿಸಿದಂತೆ ಪಕ್ಷದ ಸಂಬಂಧ ಪಟ್ಟವರಿಗೆ ಏನು ಹೇಳಬೇಕೋ ಎಲ್ಲವನ್ನು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸಚಿವರು ಮೂರು ಕಾಸಿನ ಬೆಲೆ ಕೊಡುತ್ತಿಲ್ಲ. ಸಂಘಟನಾತ್ಮಕವಾಗಿ ನಾವು ವಿಫಲರಾಗಲು ಇದೇ ಕಾರಣ. ಶಾಸಕರ ಪರಿಸ್ಥಿತಿಯೂ ಚಿಂತಾಜನಕವಾಗಿದೆ. ಶಾಸಕರ ಭೇಟಿಗೆ ಸಚಿವರು ಅವಕಾಶ ಕೊಡುತ್ತಿಲ್ಲ. ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ವಿನಯ್ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...