37 ವರ್ಷದ ವ್ಯಕ್ತಿಯೊಬ್ಬ ಮಧ್ಯಪ್ರದೇಶದ ಗುಣಾ ಜಿಲ್ಲೆಯ ಜೋಗಿಪುರ ಗ್ರಾಮದಲ್ಲಿ ನದಿಗೆ ಸ್ನಾನಕ್ಕಾಗಿ ಇಳಿದಿದ್ದಾಗ ಮುಳುಗಿ ಮೃತಪಟ್ಟಿದ್ದ. ಆದರೆ, ತಮ್ಮ ಎಂದಿನ ಜೀವರಕ್ಷಣೆ ತಂತ್ರ ಮುಂದುವರಿಸಿದ ಗ್ರಾಮಸ್ಥರು, ಆತನ ದೇಹವನ್ನು ಮರವೊಂದಕ್ಕೆ ಉಲ್ಟಾ ಕಟ್ಟಿ ಹಾಕಿ ಜೋಕಾಲಿಯಂತೆ ತೂಗುತ್ತಿದ್ದರು.
ವಿಷಾಹಾರ ಸೇವನೆಯಿಂದ 100 ಕ್ಕೂ ಅಧಿಕ ಮಂದಿ ಅಸ್ವಸ್ಥ
ಉಸಿರಾಟ ನಿಲ್ಲಿಸಿರುವ ನೀರು, ಕೆಳಕ್ಕೆ ಇಳಿಯಲಿ ಎಂದು ಅವರು ಭಾರಿ ಯತ್ನ ನಡೆಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಪೊಲೀಸರಿಗೆ ಮುಟ್ಟಿದೆ.
ಕೊನೆಗೆ, ಸಮೀಪದ ಸನಾಯಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ತೋರಣ್ ಸಿಂಗ್ ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ಮುಳುಗಿ ಮೃತನಾದ ವ್ಯಕ್ತಿಯ ಶವವನ್ನು ಮರದಿಂದ ಇಳಿಸಲು ಗ್ರಾಮಸ್ಥರ ಮನವೊಲಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.