alex Certify ಪ್ರಾಣವನ್ನೇ ಪಣಕ್ಕಿಟ್ಟು ಟ್ರಾಲಿಯಲ್ಲಿ ನದಿ ದಾಟುತ್ತಾರೆ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣವನ್ನೇ ಪಣಕ್ಕಿಟ್ಟು ಟ್ರಾಲಿಯಲ್ಲಿ ನದಿ ದಾಟುತ್ತಾರೆ ಜನ

MP: Villagers Risk Their Lives, Use Makeshift Hanging Trolley to Cross Overflowing River

ಸ್ವಾತಂತ್ರ‍್ಯದ 75ನೇ ಮಹೋತ್ಸವ ಆಚರಿಸಲು ಒಂದೆಡೆ ಇಡೀ ದೇಶವೇ ಸಜ್ಜಾಗುತ್ತಿದ್ದರೆ ಇತ್ತ ಮೂಲ ಸೌಕರ್ಯವಂಚಿತವಾದ ಊರುಗಳ ಮಂದಿ ಈಗಲೂ ತಮ್ಮ ಅದೇ ಪಾಡಿನಲ್ಲಿ ಮುಂದುವರೆದಿದ್ದಾರೆ.

ಮಧ್ಯ ಪ್ರದೇಶದ ದೇವಾಸ್ ಜಿಲ್ಲೆಯ ಡಜ಼ನ್‌ನಷ್ಟು ಗ್ರಾಮಗಳು ಈಗಲೂ ತಾತ್ಕಾಲಿಕ ಸೇತುವೆಗಳಿಂದ ಜೋಡಿಸಲ್ಪಟ್ಟಿದ್ದು, ಮಾನ್ಸೂನ್ ಸಂದರ್ಭದಲ್ಲಿ ನದಿಗಳು ತುಂಬಿ ಹರಿದಾಗ ಅವುಗಳನ್ನು ದಾಟಲು ಜನರು ಪ್ರಾಣವನ್ನೇ ಕೈಯಲ್ಲಿಟ್ಟುಕೊಂಡು ಹರಸಾಹಸ ಪಡಬೇಕಾಗಿದೆ.

ಇಲ್ಲಿನ ಗುನೇರಾ ಗುನೇರಿ ನದಿಯು ಮಾನ್ಸೂನ್ ಕಾಲದಲ್ಲಿ ಭೋರ್ಗರೆದು ಹರಿಯುವ ಕಾರಣ ಈ ತಾತ್ಕಾಲಿಕ ತೂಗಾಡುವ ಸೇತುವೆಗಳಲ್ಲಿ ದಾಟುವುದು ಭಾರೀ ರಿಸ್ಕಿ ಆಗಿದ್ದರೂ ಸಹ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರ ಪಾಡು ಹೇಳತೀರದಂತಾಗಿದೆ.

ಚಕ್ರಮುನಿ ಸೊಪ್ಪಿನ ‘ಬೋಂಡಾ’ ಮಾಡಿ ನೋಡಿ

ಕಬ್ಬಿಣದ ರಾಡ್‌ಗಳನ್ನು ಬಳಸಿ ಟ್ರಾಲಿ ಮಾಡಿರುವ ಗ್ರಾಮಸ್ಥರು, ಉಕ್ಕಿನ ತಂತಿಗಳಿಂದ ಅದನ್ನು ನೇತುಹಾಕಿದ್ದಾರೆ. ಒಮ್ಮೆಲೆ ಇಬ್ಬರನ್ನು ಮಾತ್ರವೇ ಹೊತ್ತೊಯ್ಯಬಲ್ಲ ಈ ಟ್ರಾಲಿಯಲ್ಲಿ ಸಾಗುವುದು ಬಹಳ ಅಪಾಯಕಾರಿಯಾಗಿದೆ.

ಭಾರೀ ಮಳೆಯಾದಾಗ ಈ ಊರುಗಳು ಹೊರಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಳ್ಳುತ್ತವೆ. ಹೀಗಾಗಿ ಯಾವುದೇ ಬೇರೆ ಆಯ್ಕೆ ಇಲ್ಲದೇ ಜೀವವನ್ನೇ ಪಣಕ್ಕಿಟ್ಟು ಈ ಟ್ರಾಲಿಗಳನ್ನು ಬಳಸಬೇಕಾಗಿ ಬಂದಿದೆ ಎನ್ನುತ್ತಾರೆ ಸ್ಥಳೀಯರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...