ಭಾರತದ ಬಹುತೇಕ ಮನೆಗಳಲ್ಲಿ ಅಗರಬತ್ತಿಯನ್ನು ಬಳಸಲಾಗುತ್ತದೆ. ದೇವರ ಪೂಜೆಗೆ ಅಗರಬತ್ತಿ ಇರ್ಲೇಬೇಕು. ಭಾರತದಲ್ಲಿ ಅನೇಕ ಅಗರಬತ್ತಿ ಕಾರ್ಖಾನೆಗಳಿವೆ. ಕೆಲವರು ಮನೆಯಲ್ಲಿಯೇ ಅಗರಬತ್ತಿ ತಯಾರಿಸಿ ಮಾರಾಟ ಮಾಡುತ್ತಾರೆ. ಆದ್ರೆ ಭಾರತದಲ್ಲಿ ಮಾತ್ರವಲ್ಲ ನೆರೆ ದೇಶದಲ್ಲೂ ಅಗರಬತ್ತಿ ತಯಾರಾಗುತ್ತದೆ.
ಅಗರಬತ್ತಿ ತಯಾರಿಸುವ ಆ ಗ್ರಾಮ ವಿಯೆಟ್ನಾಂನಲ್ಲಿದೆ. ಗ್ರಾಮದ ಹೆಸರು ಕಾಂಗ್ ಫೂ ಚೌ. ಭಾರತದಲ್ಲಿ ಕಪ್ಪು ಅಥವಾ ಬೂದು ಬಣ್ಣದ ಅಗರಬತ್ತಿಯನ್ನು ತಯಾರಿಸಲಾಗುತ್ತದೆ. ಆದ್ರೆ ಕಾಂಗ್ ಫೋ ಚೌನಲ್ಲಿ ನೀವು ಬಣ್ಣ ಬಣ್ಣದ ಅಗರಬತ್ತಿ ತಯಾರಾಗುತ್ತದೆ.
ಮನೆಯ ಮುಂದಿನ ಜಾಗದಲ್ಲಿ ಇವರು ಬಣ್ಣ ಬಣ್ಣದ ಅಗರಬತ್ತಿ ತಯಾರಿಸುತ್ತಾರೆ. ಕೆಂಪು, ಹಸಿರು ಮತ್ತು ಹಳದಿ ಬಣ್ಣದ ಅಗರಬತ್ತಿಯನ್ನು ಅಲ್ಲಿ ತಯಾರಿಸಲಾಗುತ್ತದೆ. ಅಗರಬತ್ತಿ ಮಾರಾಟದಿಂದ ಇಲ್ಲಿನ ಸಾವಿರಾರು ಮಂದಿ ಹಣ ಗಳಿಸ್ತಾರೆ. ಇದ್ರ ಜೊತೆಗೆ ಪ್ರವಾಸಿಗರಿಂದ ಇವರ ಗಳಿಕೆ ಹೆಚ್ಚಾಗುತ್ತದೆ.
ಅಗರಬತ್ತಿ ಗ್ರಾಮಕ್ಕೆ ಬರುವ ಪ್ರವಾಸಿಗರು ಫೋಟೋ ಕ್ಲಿಕ್ಕಿಸುತ್ತಾರೆ. ಅಲ್ಲಿನ ಗ್ರಾಮದ ಜನರು ಒಂದು ಸೆಲ್ಫಿಗೆ 170 ರೂಪಾಯಿ ಚಾರ್ಜ್ ಮಾಡ್ತಾರೆ. ಇಲ್ಲಿ ಸಿಗುವ ಅಗರಬತ್ತಿ ಬೆಲೆ ಬಹಳ ಕಡಿಮೆ. ಇದೇ ಕಾರಣಕ್ಕೆ ಪ್ರವಾಸಕ್ಕೆ ಬರುವ ಜನರು ತಮ್ಮ ಜೊತೆ ಅಗರಬತ್ತಿ ಕೊಂಡೊಯ್ಯುತ್ತಾರೆ.