ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಸಾಂಪ್ರದಾಯಿಕ ಖಾದ್ಯ ತಯಾರಿಕೆಯ ಯೂಟ್ಯೂಬ್ ಚಾನೆಲ್ 07-07-2021 6:34AM IST / No Comments / Posted In: Latest News, India, Live News ದಿ ವಿಲೇಜ್ ಕುಕ್ಕಿಂಗ್ ಚಾನೆಲ್ ಎಂಬ ಹೆಸರನ್ನ ಹೊಂದಿರುವ ಯುಟ್ಯೂಬ್ ಚಾನೆಲ್ 1 ಕೋಟಿ ಅನುಯಾಯಿಗಳನ್ನ ಹೊಂದಿರುವ ತಮಿಳುನಾಡಿನ ಮೊದಲ ಯುಟ್ಯೂಬ್ ಚಾನೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚಿನ ಚುನಾವಣಾ ಪ್ರಚಾರದ ಅಂಗವಾಗಿ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಇದೇ ಯುಟ್ಯೂಬ್ ಚಾನೆಲ್ನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಶ್ರೂಮ್ ಬಿರಿಯಾನಿಯನ್ನ ಮಾಡಿದ್ದನ್ನ ನಾವಿಲ್ಲಿ ಸ್ಮರಿಸಬಹುದಾಗಿದೆ. 1 ಕೋಟಿ ಅನುಯಾಯಿಗಳನ್ನ ಸಂಪಾದಿಸಿದ ಕಾರಣಕ್ಕೆ ಯುಟ್ಯೂಬ್ ಕಂಪನಿಯು ಇವರಿಗೆ ಡೈಮಂಡ್ ಪ್ಲೇ ಉಡುಗೊರೆಯನ್ನ ನೀಡಿದೆ. 75 ವರ್ಷದ ಪೆರಿಯಥಂಬಿ ಹಾಗೂ ಅವರ ಮೊಮ್ಮಕ್ಕಳಾದ ಅಯ್ಯರ್, ಮುರುಗೇಸನ್, ತಮಿಳ್ಸೆಲ್ವನ್, ಮುತ್ತುಮಂಚಿಕಮ್ ಹಾಗು ಸುಬ್ರಮಣಿಯನ್ ಈ ಯುಟ್ಯೂಬ್ ಚಾನೆಲ್ನ ಸದಸ್ಯರಾಗಿದ್ದಾರೆ. ಇವರು ಯುಟ್ಯೂಬ್ ಚಾನೆಲ್ನಿಂದ ಬಂದ ಆದಾಯದಲ್ಲಿ 10 ಲಕ್ಷ ರೂಪಾಯಿಗಳನ್ನ ತಮಿಳುನಾಡು ಸಿಎಂ ಪರಿಹಾರ ನಿಧಿಗೆ ವರ್ಗಾವಣೆ ಮಾಡಿದ್ದರು. ಈ ಯುಟ್ಯೂಬ್ ಚಾನೆಲ್ನ್ನು ಏಪ್ರಿಲ್ 2018ರಲ್ಲಿ ಸ್ಥಾಪನೆ ಮಾಡಲಾಯ್ತು. ಪುಡುಕೊಟ್ಟೈ ಜಿಲ್ಲೆಯ ಕೃಷಿ ಭೂಮಿಯಲ್ಲಿಯೇ ವಿವಿಧ ಸಾಂಪ್ರದಾಯಿಕ ಖಾದ್ಯಗಳನ್ನ ತಯಾರಿಸಿ ಈ ಚಾನೆಲ್ಗೆ ಅಪ್ಲೋಡ್ ಮಾಡಲಾಗುತ್ತಿದೆ. ಸಾಂಪ್ರದಾಯಿಕ ಖಾದ್ಯವೇ ಈ ಚಾನೆಲ್ನ ಪ್ರಮುಖ ಹೈಲೈಟ್. ಈ ಕಾರ್ಯಕ್ರಮಕ್ಕಾಗಿ ತಯಾರು ಮಾಡಿದ ಖಾದ್ಯಗಳನ್ನ ಅನಾಥಾಶ್ರಮಕ್ಕೆ ತಲುಪಿಸುವ ಮೂಲಕ ಈ ಚಾನೆಲ್ನ ಸದಸ್ಯರು ಮಾನವೀಯತೆ ಮೆರೆಯುತ್ತಿದ್ದಾರೆ.