
ವಿಕ್ರಮ್ ಮತ್ತು ಅವರ ಮಗ ಧ್ರುವ್ ಅವರ ಮ್ಯಾನೇಜರ್ ಸೂರ್ಯನಾರಾಯಣನ್ ಈ ಬಗ್ಗೆ ಟ್ವೀಟ್ ಮಾಡಿದ್ದು, “ಅದಿತಾ ಕರಿಕಾಳನ್ ಪಾತ್ರಧಾರಿ ಚಿಯಾನ್ ವಿಕ್ರಮ್ ಅವರು ಸ್ವೀಕರಿಸಿದ ಎಲ್ಲಾ ಪ್ರೀತಿ ಮತ್ತು ಮೆಚ್ಚುಗೆಗೆ ಮತ್ತು ಪ್ರಪಂಚದಾದ್ಯಂತ ಪೊನ್ನಿಯಿನ್ ಸೆಲ್ವನ್ ಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ರಿಹರ್ಸಲ್ ಸಮಯದಲ್ಲಿ ಚಿಯಾನ್ ಗಾಯಗೊಂಡಿದ್ದಾರೆ. ಇದರಿಂದಾಗಿ ಪಕ್ಕೆಲುಬು ಮುರಿದಿದೆ. ಇದರಿಂದಾಗಿ ಅವರು ಸ್ವಲ್ಪ ಸಮಯದವರೆಗೆ ತಮ್ಮ ತಂಗಲಾನ್ ಚಿತ್ರ ತಂಡವನ್ನು ಸೇರಲು ಸಾಧ್ಯವಾಗುವುದಿಲ್ಲ. ಅವರು ನಿಮ್ಮ ಪ್ರೀತಿಗಾಗಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾರೆ ಮತ್ತು ಅವರು ಮತ್ತೆ ಹಿಂದಿರುಗುವ ಭರವಸೆ ನೀಡುತ್ತಾರೆ ” ಎಂದಿದ್ದಾರೆ.
ಈ ಟ್ವೀಟ್‌ಗೆ ಅಭಿಮಾನಿಗಳು ಶೀಘ್ರವಾಗಿ ಪ್ರತಿಕ್ರಿಯಿಸಿದ್ದು, ನಟ ವಿಕ್ರಮ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ನಾವು ನಿಮ್ಮೊಂದಿಗೆ ಇರುವವರೆಗೂ ನಿಮಗೆ ಏನೂ ಆಗುವುದಿಲ್ಲ ಎಂದು ಭಾವುಕರಾಗಿ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.
ಹಲವು ದಶಕಗಳ ಹಿಂದೆ ಕೋಲಾರದ ಚಿನ್ನದ ಗಣಿಗಳಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದ ತಂಗಲನ್‌ನಲ್ಲಿ ವಿಕ್ರಮ್ ಸ್ಥಳೀಯ ಬುಡಕಟ್ಟು ಜನಾಂಗದ ಮುಖ್ಯಸ್ಥನಾಗಿ ನಟಿಸಿದ್ದಾರೆ. ಚಿತ್ರದ ಮೇಕಿಂಗ್ ವೀಡಿಯೋ ಇತ್ತೀಚೆಗೆ ಬಿಡುಗಡೆಯಾಗಿತ್ತು.