alex Certify BREAKING : ಇಂದು ಸಂಜೆ 6.04 ಕ್ಕೆ ಚಂದ್ರನ ಮೇಲೆ ‘ವಿಕ್ರಮ್’ ಲ್ಯಾಂಡಿಂಗ್ : ‘ISRO’ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಇಂದು ಸಂಜೆ 6.04 ಕ್ಕೆ ಚಂದ್ರನ ಮೇಲೆ ‘ವಿಕ್ರಮ್’ ಲ್ಯಾಂಡಿಂಗ್ : ‘ISRO’ ಸ್ಪಷ್ಟನೆ

ಇಂದು ಸಂಜೆ 6 .04 ಕ್ಕೆ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಆಗಲಿದೆ ಎಂದು ಇಸ್ರೋ ಸ್ಪಷ್ಟನೆ ನೀಡಿದೆ.

ಸ್ವಯಂಚಾಲಿತ ಲ್ಯಾಂಡಿಂಗ್ ಸೀಕ್ವೆನ್ಸ್ ಪ್ರಾರಂಭಕ್ಕೆ ಎಲ್ಲವೂ ಸಿದ್ಧವಾಗಿದೆ. ಸಂಜೆ 5 ಗಂಟೆ 44 ನಿಮಿಷ ಸುಮಾರಿಗೆ ಗೊತ್ತುಪಡಿಸಿದ ಸ್ಥಳದಲ್ಲಿ ಲ್ಯಾಂಡರ್ ಮಾಡ್ಯೂಲ್ ಆಗಮನದ ನಿರೀಕ್ಷೆಯಿದೆ. ಕಾರ್ಯಾಚರಣೆಯ ನೇರ ಪ್ರಸಾರ ಸಂಜೆ 5.20ರಿಂದ ಆರಂಭವಾಗಲಿದೆ. ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದಿರನನ್ನು ಸ್ಪರ್ಶ ಮಾಡಲಿದೆ ಎಂದು ಇಸ್ರೋ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ.

ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಗೆ ಕ್ಷಣಗಣನೆಯಾಗಿದ್ದು, ರಾಜ್ಯದೆಲ್ಲೆಡೆ ಹೋಮ ಹವನ, ಪ್ರಾರ್ಥನೆ ಜೋರಾಗಿದೆ. ಚಂದ್ರಯಾನ-3 ಯಶಸ್ವಿಯಾಗಲೆಂದು ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಬೆಂಗಳೂರಿನ ನೆಹರು ತಾರಾಲಯದಲ್ಲಿ ಚಂದ್ರಯಾನ -3’ ಲ್ಯಾಂಡಿಂಗ್ ಲೈವ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇಂದು ಸಂಜೆ 5 ಗಂಟೆ 10 ನಿಮಿಷಕ್ಕೆ ಚಂದ್ರಯಾನ-3 ಲೈವ್ ಆರಂಭವಾಗಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...