ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನಪರಿಷತ್ ಚುನಾವಣೆಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವ್ಯಂಗ್ಯವಾಡಿದೆ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸುವಾಗ ‘ಕಣ್ಣೀರು’. ಬಿ.ವೈ. ವಿಜಯೇಂದ್ರ ಅವರಿಗೆ ಟಿಕೆಟ್ ನಿರಾಕರಿಸುವಾಗ ‘ರಕ್ತಕಣ್ಣೀರು’. ಇದು ಬಿಜೆಪಿ ಯಡಿಯೂರಪ್ಪನವರಿಗೆ ನೀಡುತ್ತಿರುವ ಋಣಸಂದಾಯದ ಕೊಡುಗೆ ಎಂದು ಹೇಳಿದೆ.
ಬಿಜೆಪಿಯಲ್ಲಿನ ‘ಸಂತೋಷ ಕೂಟ’ ಯಡಿಯೂರಪ್ಪ ಅವರನ್ನಲ್ಲದೇ, ಇಡೀ ಕುಟುಂಬವನ್ನೇ ವನವಾಸಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ವರ್ಸಸ್ ಬಿಜೆಪಿ ಯುದ್ಧ ಕಣ ರಂಗೇರಲಿದೆ ಎಂದು ಟ್ವೀಟ್ ಮಾಡಲಾಗಿದೆ. ಈ ಮೂಲಕ ವಿಜಯೇಂದ್ರ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ.