ಕೇಂದ್ರ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಅವರ ನವದೆಹಲಿಯ ಸರ್ಕಾರಿ ಬಂಗಲೆ ಪೂಜೆಯನ್ನು ಇಂದು ನಡೆಸಲಾಗಿದ್ದು, ಆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಅವರಿಗಾಗಲಿ ಅಥವಾ ಭಿನ್ನ ಬಣದ ನಾಯಕರಿಗಾಗಲಿ ಆಹ್ವಾನ ನೀಡಿರಲಿಲ್ಲವೆಂದು ತಿಳಿದುಬಂದಿದೆ.
ಅದರೆ ಭಾನುವಾರ ನವದೆಹಲಿಗೆ ಭೇಟಿ ನೀಡಿರುವ ಬಿ.ವೈ. ವಿಜಯೇಂದ್ರ, ನಾನು ಸೋಮಣ್ಣ ಅವರ ನಿವಾಸದ ಪೂಜೆಗೆ ಹೋಗುತ್ತೇನೆ ಎಂದು ಹೇಳಿದ್ದರು.
ಇದರ ಮಧ್ಯೆ ದೆಹಲಿಯಲ್ಲಿ ಈಗಾಗಲೇ ಬೀಡು ಬಿಟ್ಟಿರುವ ರೆಬೆಲ್ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಮಹೇಶ್ ಕುಮಟಳ್ಳಿ ಮೊದಲಾದವರು ಇಂದು ಸೋಮಣ್ಣನವರ ನಿವಾಸಕ್ಕೆ ಭೇಟಿ ನೀಡಿ ಕುತೂಹಲ ಮೂಡಿಸಿದ್ದಾರೆ.
ಮಾಹಿತಿಗಳ ಪ್ರಕಾರ ಬಿ.ವೈ. ವಿಜಯೇಂದ್ರ ಕೂಡ ಇಂದು ಸೋಮಣ್ಣನವರ ನಿವಾಸಕ್ಕೆ ತೆರಳಲಿದ್ದಾರೆಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿ ಬಣ ಬಡಿದಾಟ ಈಗ ದೆಹಲಿ ಅಂಗಳ ತಲುಪುವ ಮೂಲಕ ಕ್ಷಣಕ್ಷಣದ ಬೆಳವಣಿಗೆಗಳು ಕುತೂಹಲ ಮೂಡಿಸುತ್ತಿವೆ.