
ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯದ ಬಹುನಿರೀಕ್ಷಿತ ‘ಮರೀಚಿ’ ಸಿನಿಮಾ ಇಂದು ರಾಜ್ಯದ್ಯಂತ ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಸಿಧ್ರುವ್ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಮತ್ತು ಸೋನು ಗೌಡ ಪ್ರಮುಖ ಪಾತ್ರದಲ್ಲಿದ್ದು, ಸ್ಪಂದನ ಸೋಮಣ್ಣ, ಅಭಿದಾಸ್, ನಿಷ್ವಿಕಾ ಪಾಟೀಲ್ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ.
ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಕಥಾಧಾರಿತ ಈ ಚಿತ್ರವನ್ನು ನಿರ್ದೇಶಕ ಸಿಧ್ರುವ್ ಮತ್ತು ಸಂತೋಷ್ ಮಾಯಪ್ಪ ನಿರ್ಮಾಣ ಮಾಡಿದ್ದು, ಜುಡಾ ಸ್ಯಾಂಡಿ ಸಂಗೀತ ಸಂಯೋಜನೆ ನೀಡಿದ್ದಾರೆ. ಶ್ರೀಕಾಂತ್ ಸಂಕಲನವಿದ್ದು, ಮನೋಹರ್ ಜೋಶಿ ಛಾಯಾಗ್ರಹಣವಿದೆ.