ವಿಜಯಪುರ: ನಾಲ್ಕು ಮಕ್ಕಳ ಜೊತೆಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 7 ಗಂಟೆಯಿಂದ ಶೋಧ ಕಾರ್ಯಾಚರಣೆ ಪುನಃ ಆರಂಭಿಸಲಾಗುತ್ತದೆ.
ಅವಳಿ ಮಕ್ಕಳಾದ ಹಸನ್ ಮತ್ತು ಹುಸೇನ್ ಭಜಂತ್ರಿ ಶವಗಳಿಗಾಗಿ ಆಲಮಟ್ಟಿ ಎಡ ದಂಡೆ ಕಾಲುವೆಯಲ್ಲಿ ಇಂದು ಕೂಡ ಶೋಧ ಕಾರ್ಯಾಚರಣೆ ನಡೆಸಲಾಗುವುದು. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿ ಶೋಧ ಕಾರ್ಯಾಚರಣೆ ನಡೆಯಲಿದೆ.
ನಿನ್ನೆ ತೆಲಗಿ ಗ್ರಾಮದಲ್ಲಿ ತನು ಭಜಂತ್ರಿ(5), ರಕ್ಷಾ ಭಜಂತ್ರಿ(3) ಶವ ಪತ್ತೆಯಾಗಿತ್ತು. ಇಂದು ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಮುಳುಗುತಜ್ಞರು ಹುಡುಕಾಟ ನಡೆಸಲಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ತಾಯಿ ಭಾಗ್ಯರನ್ನು ಸ್ಥಳೀಯರು ನಿನ್ನೆ ರಕ್ಷಿಸಿದ್ದರು.
ನಿನ್ನೆ ಕತ್ತಲಾಗಿದ್ದರಿಂದ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ನನ್ನ ಪತಿಯೇ ಮಕ್ಕಳು ಮತ್ತು ನನ್ನನ್ನು ನೀರಿಗೆ ತಳ್ಳಿದ್ದಾಗಿ ಭಾಗ್ಯಶ್ರೀ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಾರೆ.