
ವಿಜಯಪುರ: ಅಕ್ರಮವಾಗಿ ಶಶ್ತ್ರಾಸ್ತ್ರಗಳ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಹಲವೆಡೆ ದಾಳಿ ನಡೆಸಿ, 10 ಜನರನ್ನು ಬಂಧಿಸಿದ್ದಾರೆ.
ವಿಜಯಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, 10 ಜನರನ್ನು ಬಂಧಿಸಿದ್ದಾರೆ. ದಾಳಿ ವೇಳೆ 10 ಕಂಟ್ರಿ ಪಿಸ್ತೂಲ್, 24 ಸಜೀವ ಗುಂಡುಗಳನ್ನು ಜಪ್ತಿ ಮಾಡಿದ್ದಾರೆ.
ಪ್ರಕಾಶ್ ಮರ್ಕಿ, ಅಶೋಕ್ ಪರಮು, ಸುಜಿತ್ ಸುಭಾಷ್ ರಾಠೋಡ್, ಜನಾರ್ಧನ ಪವಾರ್, ಸಾಗರ್ ರಾಥೋಡ್, ಸುಖದೇವ್, ಪ್ರಕಾಶ್ ಭೀಮಸಿಂಗ್ ರಾಥೋಡ್, ಗಣೇಶ್ ಶೆಟ್ಟಿ, ಚನ್ನಪ್ಪ ಮಲ್ಲಪ್ಪ, ಸಂತೋಷ್ ಕಿಶನ್ ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿದೆ.