ವಿಜಯನಗರ: ಕೆಲ ದಿನಗಳ ಹಿಂದೆ ರೈತರೊಬ್ಬರು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ಮಿನಿ ವಿಧಾನಸೌಧವನ್ನು ಮಾರಾಟಕ್ಕಿಡುವ ಮೂಲಕ ಭಾರಿ ಸುದ್ದಿಯಾಗಿದ್ದರು. ಇದೀಗ ಆ ರೈತ ಏಕಾಏಕಿ ನಾಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ತಮ್ಮ ಭೂಮಿಯಲ್ಲಿ ಮಿನಿ ವಿಧಾನಸೌಧ ಕಟ್ಟಲಾಗಿದ್ದು, ಪರಿಹಾರ ನೀಡುವುದಾಗಿ ಹೇಳಿದ್ದ ಸರ್ಕಾರ ಯಾವುದೇ ಪರಿಹಾರವನ್ನೂ ನೀಡಿದೇ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ರೈತ ಮಲ್ಲಣ್ಣ ಬಣಕಾರ, ಮಿನಿ ವಿಧಾನಸೌಧವನ್ನು ಮಾರಾಟಕ್ಕಿಟ್ಟು ಪ್ರತಿಭಟನೆ ನಡೆಸಿದ್ದರು.
‘ಮಾಡೆಲ್’ ಆತ್ಮಹತ್ಯೆ ಯತ್ನ ಪ್ರಕರಣದ ಹಿಂದಿನ ಸ್ಪೋಟಕ ಮಾಹಿತಿ ಬಯಲು…!
ಮಿನಿ ವಿಧಾನಸೌಧ ನಿರ್ಮಾಣವಾಗಿದ್ದ ಜಮೀನನ್ನು ಮಾರಟಕ್ಕಿಡಲಾಗಿದೆ ಎಂದು ಕರಪತ್ರಗಳನ್ನು ಮುದ್ರಿಸಿ ಹಂಚಿದ್ದರು. ಆದರೆ ಇದೀಗ ರೈತ ಮಲ್ಲಣ್ಣ, ನಾಪತ್ತೆಯಾಗಿದ್ದು, ಈ ಬಗ್ಗೆ ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತಮ್ಮ ಪತಿ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರು ನೀಡಿದ್ದಾರೆ.
ರೈತನ ನಾಪತ್ತೆ ಪ್ರಕರಣದ ಹಿಂದೆ ಅಕ್ರಮ ಲೇಔಟ್ ನಿರ್ಮಾಣಕಾರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.