ವಿಜಯಪುರ: ಇಟ್ಟಂಗಿ ಭಟ್ಟಿ ಮಾಲೀಕನೊಬ್ಬ ಮೂವರು ಕಾರ್ಮಿಕರನ್ನು ಹಿಡಿದು ಹಿಗ್ಗಾಮುಗ್ಗಾ ಪೈಪ್ ನಿಂದ ಥಳಿಸಿರುವ ಅಮಾನುಷ ಘಟನೆ ವಿಜಯಪುರದಲ್ಲಿ ನಡೆದಿದೆ.
ಇಟ್ಟಂಗಿ ಭಟ್ಟಿ ಮಾಲೀಕ ಖೇಮು ರಾಠೋಡ್ ಎಂಬಾತ ಮೂವರು ಕಾರ್ಮಿಕರಿಗೆ ಮನಸೋ ಇಚ್ಛೆ ಹೊಡೆದಿದ್ದಾರೆ. ಮೂವರು ಕಾರ್ಮಿಕರು ಮುಂಗಡವಾಗಿ ಹಣ ಪಡೆದು ಬಳಿಕ ಕೆಲಸಕ್ಕೆ ಬಾರದೇ ಸತಾಯಿಸುತ್ತಿದ್ದರಂತೆ. ಕೆಲಸಕ್ಕೆ ಬಾರದೇ ವಿಳಂಬ ಮಾಡುತ್ತಿರುವುದಕ್ಕೆ ಕೋಪಗೊಂದ ಮಾಲೀಕ ಪೈಪ್ ಗಳಿಂದ ನಮಬಂದಂತೆ ಥಳಿಸಿದ್ದಾರೆ.
ವಿಜಯಪುರದ ಗಂಧಿ ಸ್ಟಾರ್ ಚೌಕ್ ಬಳಿ ಈ ಘಟನೆ ನಡೆದಿದೆ. ಸದಾಶಿವ ಮಾದರ, ಸದಾಶಿವ ಬಬಲಾದಿ ಹಾಗೂ ಉಮೇಶ್ ಎಂಬುವವರನ್ನು ಥಳಿಸಲಾಗಿದ್ದು, ಮಾಲಿಕನ ಏಟಿಗೆ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.