![](https://kannadadunia.com/wp-content/uploads/2020/07/dead-body.jpg)
ವಿಜಯಪುರ: ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಬಳಿ ಸೇತುವೆಯ ಮೇಲಿಂದ ಟಿಪ್ಪರ್ ಕೆಳಗೆ ಬಿದ್ದು ಚಾಲಕ ಕ್ಲೀನರ್ ಮೃತಪಟ್ಟಿದ್ದಾರೆ.
ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ ಟಿಪ್ಪರ್ ನದಿಯ ತಟದಲ್ಲಿ ಬಿದ್ದಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮೂರು ಕಿಲೋಮೀಟರ್ ಉದ್ದದ ಸೇತುವೆಯ ಮೇಲೆ ಘಟನೆ ನಡೆದಿದೆ.
ಟಿಪ್ಪರ್ ಚಾಲಕ ಸಚಿನ್(32), ಕ್ಲೀನರ್ ಪರಶುರಾಮ(30) ಮೃತಪಟ್ಟವರು. ಇವರಿಬ್ಬರು ಬಸವನಬಾಗೇವಾಡಿ ತಾಲೂಕಿನ ಯಾಳವಾರ ನಿವಾಸಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಕೊಲ್ಹಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.