ವಿಜಯಪುರ: ರಾತ್ರಿ ಮನೆಗೆ ಹೋಗಲು ನಿಂತಿದ್ದ 60 ವರ್ಷದ ವೃದ್ಧೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರದ ಝಂಡಾಕಟ್ಟೆ ನಿವಾಸಿ ಸದ್ದಾಮ್ ಹುಸೇನ್ ಶೇಖ್(29), ಬಸವನಗರದ ರವಿ ಶೇಖರಪ್ಪ ಕೊರ್ತಿ(29) ಬಂಧಿತ ಆರೋಪಿಗಳು. ಅತ್ಯಾಚಾರ ಎಸಗಿದ ಆರೋಪದ ಮೇಲೆ ಇವರನ್ನು ವಿಜಯಪುರ ಮಹಿಳಾ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಫೆಬ್ರವರಿ 23 ರಂದು ವಾಟರ್ ಟ್ಯಾಂಕ್ ಸಮೀಪ ಮನೆಗೆ ಹೋಗಲು ನಿಂತಿದ್ದ ವೃದ್ಧೆಯನ್ನು ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.