ವಿಜಯಪುರ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ತಡರಾತ್ರಿ ಭೂಕಂಪದ ಅನುಭವವಾಗಿದೆ. ಮೂರರಿಂದ ನಾಲ್ಕು ಬಾರಿ ಭೂಮಿಯಿಂದ ಭಾರಿ ಶಬ್ದ ಕೇಳಿ ಬಂದಿದ್ದು, ಆತಂಕದಿಂದ ಮನೆಯಿಂದ ಹೊರಗೆ ಬಂದಿದ್ದಾರೆ.
ಶಾಂತವೀರ ನಗರ, ಬಂದಾಳ ರಸ್ತೆ, ಜ್ಯೋತಿ ನಗರ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಆತಂಕದಿಂದ ಹೊರಬಂದ ಜನ ತಮಗಾದ ಅನುಭವ ಮತ್ತು ಶಬ್ದ ಕೇಳಿ ಬಂದ ಕುರಿತಾಗಿ ಮಾತನಾಡಿಕೊಂಡಿದ್ದಾರೆ. ತಡರಾತ್ರಿ ಮತ್ತು ಬೆಳಗಿನ ಜಾವ ಭೂಮಿ ಕಂಪಿಸಿದ ಮತ್ತು ಶಬ್ಧ ಕೇಳಿ ಬಂದಿದೆ ಎನ್ನಲಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ಸೆಪ್ಟೆಂಬರ್ 4 ರಂದು ವಿಜಯಪುರ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ್ದು, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 3.9 ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿತ್ತು.