ವಿಜಯಪುರದ ಇಂಡಿ ರಸ್ತೆ ಸಮೀಪ ಜೆಸಿಬಿ ಯಂತ್ರ ದುರಸ್ತಿ ಮಾಡುವ ವೇಳೆ ಯಂತ್ರಕ್ಕೆ ಸಿಲುಕಿ ಚಾಲಕ ಮತ್ತು ಪೌರಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಫೀಕ್(35) ಮತ್ತು ಅಯೂಬ್(50) ಮೃತಪಟ್ಟವರು ಎಂದು ಹೇಳಲಾಗಿದೆ. ತ್ಯಾಜ್ಯ ವಿಲೇವಾರಿ, ಸಂಸ್ಕರಣಾ ಘಟಕದಲ್ಲಿ ಜೆಸಿಬಿ ಹೈಡ್ರಾಲಿಕ್ ದುರಸ್ತಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಸಿಲುಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಜೆಸಿಬಿ ದುರಸ್ತಿಪಡಿಸಲು ಮುಂದಾಗಿದ್ದ ಈ ವೇಳೆ ಘಟನೆ ನಡೆದಿದ್ದು, ಎಪಿಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.