
ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಬೇಡವೆಂದು ಹೇಳಲು ಮುಖ್ಯಮಂತ್ರಿ ಚಂದ್ರು ಅವರು ಯಾರು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ್, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಬೇಡ ಎಂದು ಹೇಳಲು ಮುಖ್ಯಮಂತ್ರಿ ಚಂದ್ರು ಅವರು ಮುಖ್ಯಮಂತ್ರಿಯೇ ಅಥವಾ ಪ್ರಧಾನಮಂತ್ರಿಯೇ ಎಂದು ಪ್ರಶ್ನಿಸಿದ್ದಾರೆ.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಬೇಕಿದೆ. ಅದಕ್ಕಾಗಿಯೇ ನಾವು ಪಾದಯಾತ್ರೆ, ಸಮಾವೇಶ, ಹೋರಾಟ ಮಾಡಿ ನ್ಯಾಯ ಕೇಳುತ್ತಿದ್ದೇವೆ. ನಮಗೆ ಮೀಸಲಾತಿ ಬೇಡವೆಂದು ಹೇಳಲು ಮುಖ್ಯಮಂತ್ರಿ ಚಂದ್ರು ಅವರು ಯಾರು ಎಂದು ಕಿಡಿಕಾರಿದ್ದಾರೆ.