ವಿಜಯನಗರ: ಒಂದು ಲಕ್ಷರೂಪಾಯಿಗೆ ಹತ್ತು ಲಕ್ಷ ರೂಪಾಯಿಯಂತೆ ಹತ್ತು ಪಟ್ಟು ಹಣ ಡಬ್ಲಿಂಗ್ ಮಾಡಿಕೊಡ್ತೀವಿ ಎಂದು ವಂಚಕರ ಗ್ಯಾಂಗ್ ವೊಂದು ಇಡೀ ಗ್ರಾಮಸ್ಥರನ್ನೆ ವಂಚಿಸಿ 2 ಕೋಟಿ ರೂಪಾಯಿ ಲೂಟಿ ಮಾಡಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.
ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ತಾಂಡಾದಲ್ಲಿ ಈ ಘಟನೆ ನಡೆದಿದೆ. 6 ತಿಂಗಳಲ್ಲಿ ಗ್ರಾಮದಲ್ಲಿ 60 ಜನರಿಗೆ ಬರೋಬ್ಬರಿ 2 ಕೋಟಿ ರೂಪಾಯಿ ವಂಚಿಸಿರುವ ಖದೀಮರು ಎಸ್ಕೇಪ್ ಆಗಿದ್ದಾರೆ.
ಆರ್ಥಿಕ ಸಂಕಷ್ಟ ಇದ್ದರೆ ಪರಿಹಾರ ಮಾಡುತ್ತೇವೆ ಎಂದು ಹೇಳಿಕೊಂಡು ಗ್ಯಾಂಗ್ ವೊಂದು ಗ್ರಾಮಸ್ಥರ ಬಳಿ ಬಂದಿದೆ. ಮನೆಯಲ್ಲಿ ಪೂಜೆ ಮಾಡಿಸಿದರೆ ಹಣ ಡಬಲ್ ಆಗುವಂತೆ ಮಾಡುತ್ತೇವೆ ಎಂದು ಹೇಳಿದೆ. ಹೀಗೆ ಗ್ರಾಮದ ಹಲವರು ಮನೆಯಲ್ಲಿ ಫೂಜೆ ಮಾಡಿಸಲು ಒಪ್ಪಿದ್ದಾರೆ. ರಾತ್ರಿ ವೇಳೆ ಪೂಜೆ ಮಾಡಿ ಬಾಕ್ಸ್ ನಲ್ಲಿ ಹಣ ಇಡುವಂತೆ ಹೇಳಿ ಇರಿಸುತ್ತಿದ್ದರು. ಎಲ್ಲರ ಮುಂದೆ ಪೂಜೆ ಮಾಡಿ ಮೊಬೈಲ್ ಫ್ಲೈಟ್ ಮೋಡ್ ಗೆ ಹಾಕಿ ಎಂದು ಹೇಳಿ ಬಾಕ್ಸ್ ಪ್ಯಾಕ್ ಮಾಡಿಟ್ಟು ಬಳಿಕ ಎಲ್ಲರನ್ನು ಹೊರಕಳುಹಿಸಿ ಮತ್ತೆ ಪೂಜೆ ಮಾಡುತ್ತೇವೆ ಎನ್ನುತ್ತಿದ್ದರು. ಬಳಿಕ ಈ ಬಾಕ್ಸ್ ನ್ನು 168 ದಿನಗಳವರೆಗೆ ತೆಗೆಯಬಾರದು. 168 ದಿನ ಕಳೆದ ಬಳಿಕ ಬಾಕ್ಸ್ ನಲ್ಲಿದ್ದ ಹಣ ಹತ್ತುಪಟ್ಟು ಹೆಚ್ಚಾಗುತ್ತದೆ ಎಂದು ನಂಬಿಸುತ್ತಿದ್ದರು. ವಂಚಕರು ಹೇಳಿದ್ದನ್ನೆಲ್ಲ ನಂಬುತ್ತಿದ್ದ ಮನೆ ಮಂಡಿ 168 ದಿನಗಳ ಬಳಿಕ ಬಾಕ್ಸ್ ತೆರೆದು ನೋಡಿದರೆ ಇದ್ದ ಹಣ ಮಾಯವಾಗಿರುತ್ತಿತ್ತು. ಆ ಜಾಗದಲ್ಲಿ ಉದ್ದಿನಕಡ್ಡಿ ಪ್ಯಾಕೆಟ್ ಇಟ್ಟಿರುತ್ತಿದ್ದರು.
ತಾಂಡಾದ ಕಾರುಬಾರಿ ಎಂಬ ಮನೆತನ ತಾಂಡಾದ ಜನರಿಗೆ ನ್ಯಾಯ ಹೇಳುವ ಮನೆತನದವರು. ಅದೇ ಮನೆಯವರ ಮಾತು ಕೇಳಿ ಗ್ರಾಮಸ್ಥರು ಮೋಸ ಹೋಗಿದ್ದಾರೆ ಎನ್ನಲಾಗಿದೆ. ತಾಂಡಾದ ಕುಮಾರ ನಾಯ್ಕ್ ಎಂಬಾತ ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಮೂವರನ್ನು ಪೊಲಿಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್, ಕಲ್ಲಹಳ್ಳಿ ಗ್ರಾಮದ ತುಕ್ಯಾ ನಾಯ್ಕ್, ಶಂಕು ನಾಯ್ಕ್ ಬಂಧಿತ ಆರೋಪಿಗಳು. ಬಂಧಿತರಿಂದ 35 ಲಕ್ಷ ನಗದು ಹಾ, ನೋಟು ಎಣಿಸುವ ಒಂದು ಯಂತ್ರ, ಜಮ್ಕಾನಾ ಜಪ್ತಿ ಮಾಡಲಾಗಿದೆ.