ವಿಜಯನಗರ : ಕುರವತ್ತಿ ಜಾತ್ರೆಗೆ ಬಂದಿದ್ದ ಬಾಲಕ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಹಡಗಲಿ ತಾಕೂಕಿನ ಕುರುವತ್ತಿಯಲ್ಲಿ ನಡೆದಿದೆ.
ಮೃತನನ್ನು ಬ್ಯಾಡಗಿ ತಾಲೂಕಿನ ಬೀಸಲಹಳ್ಳಿ ಗ್ರಾಮದ ಮನು ಮುಚ್ಚಟ್ಟಿ (13) ಎಂದು ಗುರುತಿಸಲಾಗಿದೆ. ಕುಟುಂಬದ ಜೊತೆ ಜಾತ್ರೆಗೆ ಬಂದಿದ್ದಾಗ ಈ ಅವಘಡ ನಡೆದಿದೆ.
ಬೋಟು ಹತ್ತುವಾಗ ಬಾಲಕ ನೀರಿಗೆ ಬಿದ್ದಿದ್ದು, ಬೋಟು ನಿಲ್ಲುವ ಜಾಗದಲ್ಲಿ ಇರುವ ಆಳವಾಗಿರುವ ಜಾಗದ ಬಗ್ಗೆ ಬಾಲಕನಿಗೆ ಗೊತ್ತಿಲ್ಲದೇ ಆತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.