ರಾಯಚೂರು: ಭಕ್ತರ ಸೋಗಿನಲ್ಲಿ ಮಠಕ್ಕೆ ಬಂದ ಗ್ಯಾಂಗ್ ವೊಂದು ಮಠವನ್ನೇ ದೋಚಿ ಪರಾರಿಯಾಗಿರುವ ಘಟನೆ ರಾಯಚೂರಿನ ಲಿಂಗಸಗೂರಿನ ವಿಜಯ ಮಹಂತೇಶ್ವರ ಶಾಖಾ ಮಠದಲ್ಲಿ ನಡೆದಿದೆ.
ತಡರಾತ್ರಿ ಭಕ್ತರ ಸೋಗಿನಲ್ಲಿ ಮಠಕ್ಕೆ ಬಂದ ಗ್ಯಾಂಗ್, ಮಲಗಿದ್ದ ಸಿದ್ದಲಿಂಗ ಸ್ವಾಮೀಜಿಯವರನ್ನು ಎಬ್ಬಿಸಿ, ಬೆದರಿಕೆ ಹಾಕಿ ಮಠದಲ್ಲಿದ್ದ ಚಿನ್ನಾಭರಣ, ಹಣವನ್ನು ದೋಚಿ ಪರಾರಿಯಾಗಿದೆ.
ಮಠದಲ್ಲಿದ್ದ 80 ಗ್ರಾಂ ಚಿನ್ನ, 7 ಕೆಜಿ ಬೆಳ್ಳಿ ಆಭರಣಗಳು ಹಾಗೂ 20 ಲಕ್ಷ ಹಣ ಸೇರಿದಂತೆ 35 ಲಕ್ಷ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಲಿಂಗಸಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.