alex Certify ಗುಜರಾತ್​ ಸಿಎಂ ಸ್ಥಾನದಿಂದ ಕೆಳಗಿಳಿದ ರೂಪಾನಿ; ಸಿಎಂ ರೇಸ್​​ನಲ್ಲಿ ಯಾರಿದ್ದಾರೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಜರಾತ್​ ಸಿಎಂ ಸ್ಥಾನದಿಂದ ಕೆಳಗಿಳಿದ ರೂಪಾನಿ; ಸಿಎಂ ರೇಸ್​​ನಲ್ಲಿ ಯಾರಿದ್ದಾರೆ ಗೊತ್ತಾ…?

ಗುಜರಾತ್​ ಸಿಎಂ ಸ್ಥಾನಕ್ಕೆ ವಿಜಯ್​ ರೂಪಾನಿ ದಿಢೀರ್​ ರಾಜೀನಾಮೆ ಘೋಷಣೆ ಮಾಡಿದ್ದಾರೆ. ವಿಧಾನಸಭಾ ಚುನಾವಣೆಗೆ ಕೇವಲ 1 ವರ್ಷ ಮಾತ್ರ ಬಾಕಿ ಇರುವಾಗಲೇ ರೂಪಾನಿಯ ಈ ನಡೆ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಗುಜರಾತ್​ ಸಿಎಂ ಸ್ಥಾನದಿಂದ ವಿಜಯ್​ ರೂಪಾನಿ ಕೆಳಗೆ ಇಳಿಯುತ್ತಿದ್ದಂತೆಯೇ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಚರ್ಚೆ ಕಾವು ಪಡೆದಿದೆ.

ಗುಜರಾತ್​ ಸಿಎಂ ರೇಸ್​ನಲ್ಲಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್​, ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯ, ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್​ ಪಟೇಲ್​, ರಾಜ್ಯ ಕ್ಯಾಬಿನೇಟ್​ ಸಚಿವ ಆರ್​.ಸಿ. ಫಾಲ್ಡು ಹಾಗೂ ಗುಜರಾತ್​ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್. ಪಾಟೀಲ್​ ಹೆಸರು ಕೇಳಿ ಬರ್ತಿದೆ.

ಇವರನ್ನು ಹೊರತುಪಡಿಸಿ ಗೋವರ್ಧನ್​​ ಜದಾಫಿಯಾ ಹೆಸರು ಕೂಡ ಬಿಜೆಪಿ ಹಾಗೂ ಆರ್​ಎಸ್​ಎಸ್​ ವಲಯದಲ್ಲಿ ಸುತ್ತುತ್ತಿದೆ. ಜದಾಪಿಯಾ ಗುಜರಾತ್​ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿದ್ದಾರೆ. 2002ರಲ್ಲಿ ಗುಜರಾತ್​​ ಗೃಹ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

2017ರಲ್ಲಿ ವಿಜಯ್​​ ರೂಪಾನಿ(65) ಎರಡನೆ ಬಾರಿಗೆ ಗುಜರಾತ್​ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜ್ಯಪಾಲ ಆಚಾರ್ಯ ದೇವ್ರತ್​ಗೆ ರಾಜೀನಾಮೆ ಪತ್ರ ರವಾನಿಸಿದ ರೂಪಾನಿ ಸಿಎಂ ಸ್ಥಾನದಿಂದ ಕೆಳಗೆ ಇಳಿದಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...