
ಗಂಗಾಧರ್ ಸಾಲಿಮಠ ನಿರ್ದೇಶನದ ವಿಜಯ ರಾಘವೇಂದ್ರ ಅಭಿನಯದ ಬಹು ನಿರೀಕ್ಷಿತ ‘ಗ್ರೇ ಗೇಮ್ಸ್’ ಚಿತ್ರ ಈಗಾಗಲೇ ತನ್ನ ಹಾಡುಗಳ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದ್ದು, ಇದೇ ಮೇ ಹತ್ತಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಆನ್ಲೈನ್ ಗೇಮಿಂಗ್ ಕುರಿತ ಈ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಚಿತ್ರವನ್ನು ಡೀಸ್ ಫಿಲ್ಮ್ಸ್ ಬ್ಯಾನರ್ ನಲ್ಲಿ ಆನಂದ್ ಹೆಚ್ ಮುಘಾಡ್ ನಿರ್ಮಾಣ ಮಾಡಿದ್ದು, ವಿಜಯ ರಾಘವೇಂದ್ರ ಸೇರಿದಂತೆ ಶೃತಿ ಪ್ರಕಾಶ್, ಭಾವನಾ ರಾವ್, ರವಿ ಭಟ್, ಚೈತ್ರ ವಸ್ತಾರೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಯಾಂಶ ಶ್ರೀರಾಮ್ ಸಂಗೀತ ಸಂಯೋಜನೆ ನೀಡಿದ್ದು, ಜಗದೀಶ್ ಎನ್ ಸಂಕಲನ, ಟಗರು ರಾಜು ನೃತ್ಯ ನಿರ್ದೇಶನ, ವರುಣ್ ಡಿ.ಕೆ. ಛಾಯಾಗ್ರಹಣವಿದೆ. ಇದೊಂದು ಫ್ಯಾಮಿಲಿ ಡ್ರಾಮಾ ಕಥಾ ಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ .