ವಿಶ್ವದ ದುಬಾರಿ ಕಾರುಗಳಲ್ಲಿ ಲ್ಯಾಂಬೋರ್ಗಿನಿ ಒಂದು. ದುಬಾರಿ ಕಾರನ್ನು ವಿಶ್ವದ ಕೆಲವೇ ಜನರು ಖರೀದಿಸಿದ್ದಾರೆ. ಸದ್ಯ ಲ್ಯಾಂಬೋರ್ಗಿನಿ ಕಾರಿನ ಬೆಲೆ 27 ಕೋಟಿ ರೂಪಾಯಿ. ಇಷ್ಟು ಹಣಕೊಟ್ಟು ಕಾರು ಖರೀದಿಸಲು ಸಾಧ್ಯವಾಗದ ಲ್ಯಾಂಬೋರ್ಗಿನಿ ಪ್ರಿಯರು ಏನು ಬೇಕಾದ್ರೂ ಮಾಡ್ತಾರೆ. ಇದಕ್ಕೆ ವಿಯೆಟ್ನಾಂನ ಟ್ರೂಂಗ್ ವ್ಯಾನ್ ದಾವೊ ಉತ್ತಮ ನಿದರ್ಶನ.
ಕಾರು ಪ್ರೇಮಿ ಟ್ರೂಂಗ್ ಮರದಿಂದ ಲ್ಯಾಂಬೋರ್ಗಿನಿ ಕಾರನ್ನು ತಯಾರಿಸಿದ್ದಾನೆ. ಇದು ಪ್ರದರ್ಶನದ ಕಾರಲ್ಲ. ಇದು 25 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಇದು ರಿಮೋಟ್ ಕಂಟ್ರೋಲ್ ಕಾರು. ಟ್ರೂಂಗ್ ಇದನ್ನು ತಯಾರಿಸಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ಕಾರು ತಯಾರಿಸುವ ವಿಡಿಯೋ ಹಾಕಲಾಗಿದೆ. 15 ನಿಮಿಷದ ವಿಡಿಯೋದಲ್ಲಿ ಕಾರು ತಯಾರಿಸುವ ವಿಧಾನವನ್ನು ಹೇಳಲಾಗಿದೆ.
ಮಗನಿಗೆ ಆಟಿಕೆ ಕಾರು ನೀಡುವ ಬದಲು ಟ್ರೂಂಗ್ ಈ ಕಾರನ್ನು ತಯಾರಿಸಿ ನೀಡಿದ್ದಾನೆ. ಈ ಕಾರು ತಯಾರಿಸಲು 45 ದಿನ ತೆಗೆದುಕೊಂಡಿದ್ದಾನೆ. ಈ ಕಾರಿಗೆ ತ್ಯಾಜ್ಯ ಮರ ಬಳಸಲಾಗಿದೆ. ಕಾರಿಗೆ ಅಳವಡಿಸಿರುವ ಮೋಟರ್ ನಿಂದಾಗಿ ಕಾರು 25 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ.