ವಿಯಾಟ್ನಾಂ: ಭೂಮಿಯ ಮೇಲೆ ಹಲವಾರು ಕುತೂಹಲದ ಘಟನೆಗಳು ಸಂಭವಿಸುತ್ತವೆ. ಅವುಗಳಲ್ಲಿ ಕೆಲವೊಂದು ವಿಚಿತ್ರ ಎನಿಸುತ್ತವೆ. ಯಾವ್ಯಾವುದೋ ಕಾರಣಕ್ಕೆ ಇಡೀ ಊರನ್ನೇ ತೊರೆದು ಹೋದವರ ಕಥೆಗಳೂ ಕುತೂಹಲ ಎನಿಸುತ್ತವೆ. ಅಂಥವುಗಳಲ್ಲಿ ಒಂದು ಮಧ್ಯ ವಿಯೆಟ್ನಾಂನ ಹಳ್ಳಿ.
ಈ ಹಳ್ಳಿಯಲ್ಲಿ ಮಳೆಗಾಲದಲ್ಲಿ ಪದೇ ಪದೇ ಸಿಡಿಲು ಬಡಿದು ಸ್ಥಳೀಯರು ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿರುವ ಅಂಶ ಇದೀಗ ಬೆಳಕಿವೆ ಬಂದಿದೆ. ವಿಯೆಟ್ನಾಂನ ಸಾನ್ ಟೇ ಜಿಲ್ಲೆಯ ಲಾಂಗ್ ವಿಟ್ ಗ್ರಾಮದ ನಿವಾಸಿಗಳು, ವರ್ಷಕ್ಕೆ ಹಲವಾರು ಬಾರಿ ತಮ್ಮ ಮನೆಗಳನ್ನು ತೊರೆಯಬೇಕಾಗುತ್ತಿದೆ. ಇದಕ್ಕೆ ಕಾರಣ, ಮಿಂಚು!
ಇಲ್ಲಿ ಬರುವ ಭಯಾನಕ ಮಿಂಚಿನಿಂದಾಗಿ ಜಾನುವಾರುಗಳ ಸಾವಿನ ಸಂಖ್ಯೆಗೆ ಲೆಕ್ಕವೇ ಇಲ್ಲ. ಜನರು ಕೂಡ ಸಿಡಿಲಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಹೆದರಿ ಜನರು ಮಳೆಗಾಲದಲ್ಲಿ ಗ್ರಾಮವನ್ನೇ ತೊರೆದು ಹೋಗುತ್ತಿದ್ದಾರೆ. ಇಲ್ಲಿ ಇಷ್ಟೇಕೆ ಸಿಡಿಲು ಬಡಿಯುತ್ತಿದೆ ಎಂಬುದಕ್ಕೆ ಹಲವಾರು ಕಾರಣಗಳನ್ನು ನೀಡಲಾಗುತ್ತಿದೆಯಾದರೂ ಇದಕ್ಕೆ ಪರಿಹಾರವಿನ್ನೂ ಸಿಕ್ಕಿಲ್ಲ.