
ಬೆಂಗಳೂರು: ಹನಿಟ್ರ್ಯಾಪ್ ಗದ್ದಲ-ಕೋಲಾಹಲಗಳ ನಡುವೆಯೇ ರಾಜ್ಯ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಬಜೆಟ್ ಅಧಿವೇಶನದ ಕೊನೆಯ ಎರಡು ದಿನಗಳ ಕಲಾಪ ಹನಿಟ್ರ್ಯಾಪ್ ಪ್ರಕರಣ ಗದ್ದಲದಲ್ಲೇ ಮುಗಿದಿದೆ. ವಿಧಾನಸಭೆ ಕೊನೆ ದಿನದ ಕಲಾಪದಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಸಸ್ಪೆಂಡ್ ಮಾಡಿ ಸ್ಪೀಕರ್ ಆದೇಶ ಹೊರಡಿಸಿದರು. ಬಳಿಕ ಕೆಲ ಕಾಲ ಕಲಾಪ ಮುಂದೂಡಲಾಯಿತು.
ಪುನಃ ಕಲಾಪ ಆರಂಭವಾಗುತ್ತಿದ್ದಂತೆ ಉಳಿದ ಬಿಜೆಪಿ ಸದಸ್ಯರು ಶಾಸಕರ ಅಮಾನತು ಖಂಡಿಸಿ ಸದನದಲ್ಲಿ ಪ್ರತಿಭಟನೆ, ಗದ್ದಲ ಮುಂದುವರೆಸಿದರು. ಗದ್ದಲದ ನಡುವೆಯೂ ಗುತ್ತಿಗೆಯಲ್ಲಿ ಮುಸ್ಲಿಂ ಮೀಸಲಾತಿ ವಿಧೇಯಕ ಹಾಗೂ ಅರಮನೆ ಭೂಕಬಳಿಕೆ ಮತ್ತು ನಿಯಂತ್ರಣ ತಿದ್ದುಪಡಿ ವಿಧೇಯಕ ಅಂಗೀಕರಿಸಲಾಯಿತು.
ಬಳಿಕ ರಾಷ್ಟ್ರಗೀತೆ ಮೂಲಕ ವಿಧಾನಸಭೆ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿ ಸ್ಪೀಕರ್ ಯು.ಟಿ.ಖಾದರ್ ಆದೇಶ ಹೊರಡಿಸಿದರು.