
ಬೆಂಗಳೂರು: ಹನಿಟ್ರ್ಯಾಪ್ ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ಎರಡು ಪ್ರಮುಖ ವಿಧೇಯಕಗಳನ್ನು ಅಂಗೀರಿಸಲಾಗಿದೆ.
ಬಜೆಟ್ ಅಧಿವೇಶನದ ಕೊನೆ ದಿನವಾದ ಇಂದು ಸಚಿವರಿಗೆ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಬಿಜೆಪಿ ಸದಸ್ಯರು ವಿನನಸಭೆಲ್ಲಿ ಗದ್ದಲವೆಬ್ಬಿಸಿ, ವಿಧೇಯಕಗಳನ್ನು ಹರಿದು ಸ್ಪೀಕರ್ ಪೀಠದ ಮೇಲೆ ಎಸೆದು ಅಗೌರವ ತೋರಿದ ಕಾರಣಕ್ಕೆ 18 ಬಿಜೆಪಿ ಶಾಸಕರನ್ನು ಸ್ಪೀಕರ್ ಯು.ಟಿ.ಖಾದರ್ 6 ತಿಂಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಇದನ್ನು ಖಂಡಿಸಿ ಬಿಜೆಪಿ ಸದಸ್ಯರು ಸದನದಲ್ಲಿ ಗದ್ದಲ ತೀವ್ರಗೊಳಿಸಿದ್ದಾರೆ. ವಿಪಕ್ಷಗಳ ಗದ್ದಲದ ನಡಿವೆಯೇ ಕಲಾಪ ಮುಂದುವರೆದಿದ್ದು, ಈ ವೇಳೆ ಎರಡು ಪ್ರಮುಖ ಬಿಲ್ ಪಾಸ್ ಮಾಡಲಾಗಿದೆ.
ಗುತ್ತಿಗೆಯಲ್ಲಿ ಮುಸ್ಲಿಂ ಮೀಸಲಾತಿ ವಿಧೇಯಕ ಹಾಗೂ ಅರಮನೆ ಭೂಕಬಳಿಕೆ ಮತ್ತು ನಿಯಂತ್ರಣ ತಿದ್ದುಪಡಿ ವಿಧೇಯ ಅಂಗೀಕರಿಸಲಾಯಿತು.