
ಬೆಂಗಳೂರು: ರಾಜ್ಯದ ಶಕ್ತಿ ಸೌಧವಾಗಿರುವ ವಿಧಾನಸೌಧದ ಗಾರ್ಡನ್ ನಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಶಾಸಕರ ಭವನದಿಂದ ವಿಧಾನಸೌಧ ಪ್ರವೇಶಿಸುವ ಮಾರ್ಗದಲ್ಲಿ ಕೆ.ಸಿ. ರೆಡ್ಡಿ ಪ್ರತಿಮೆಯ ಬಳಿ 5 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದೆ.
ಹಳ್ಳದ ಒಳಗೆ ಸೇರಿಕೊಂಡಿದ್ದ ನಾಗರಹಾವನ್ನು ಉರಗ ರಕ್ಷಕರು ರಕ್ಷಣೆ ಮಾಡಿದ್ದಾರೆ. ಹಾವು ಸೇರಿಕೊಂಡಿದ್ದ ಹಳ್ಳಕ್ಕೆ ನೀರು ಹರಿಸಿ ನಾಗರಹಾವನ್ನು ಹಿಡಿಯಲಾಗಿದೆ. ಸುಮಾರು ಒಂದೂವರೆ ಗಂಟೆ ಕಾಲ ಹುಡುಕಾಟ ನಡೆಸಿ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ನಾಗರಹಾವು ರಕ್ಷಿಸಿದ ಉರಗ ರಕ್ಷಕರು ವಿಧಾನಸೌಧದಿಂದ ಅದನ್ನು ತೆಗೆದುಕೊಂಡು ಹೋಗಿದ್ದಾರೆ.