
ಬೆಂಗಳೂರು: ರಾಜ್ಯದ ಶಕ್ತಿಕೇಂದ್ರವಾಗಿರುವ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲು ಸರ್ಕಾರ ಮುಂದಾಗಿದೆ.
ವಿಧಾನಸೌಧ ಕಟ್ಟಡಕ್ಕೆ ವಾರಾಂತ್ಯ, ಸ್ವಾತಂತ್ರ್ಯ ದಿನಾಚರಣೆ, ಇತರೆ ರಾಷ್ಟ್ರೀಯ ಹಬ್ಬದ ದಿನಗಳಂದು ವಿದ್ಯುತ್ ದೀಪಾಲಂಕಾರ ಬೆಳಗಿಸಲು ಶಾಶ್ವತ ವ್ಯವಸ್ಥೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಪ್ರಸ್ತುತ ವಿಶೇಷ ಸಂದರ್ಭದಲ್ಲಿ ಗುತ್ತಿಗೆದಾರರಿಂದ ಸೇವೆ ಪಡೆದುಕೊಳ್ಳಲಾಗುತ್ತಿದೆ. ಇನ್ನು ಮುಂದೆ ಶಾಶ್ವತ ವ್ಯವಸ್ಥೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.
ಇದಕ್ಕಾಗಿ 4.98 ಕೋಟಿ ರೂಪಾಯಿ ವಿನಿಯೋಗಿಸಲು ಉದ್ದೇಶಿಸಲಾಗಿದೆ. ಟೆಂಡರ್ ಕರೆದೆ ಪಾರದರ್ಶಕ ಕಾಯ್ದೆಯಿಂದ 4ಜಿ ವಿನಾಯಿತಿ ಪಡೆದು ಕಾಮಗಾರಿ ನಡೆಸಲು ಲೋಕೋಪಯೋಗಿ ಇಲಾಖೆಗೆ ಅವಕಾಶ ಕಲ್ಪಿಸಲಾಗಿದೆ.
ಶಾಶ್ವತ ವಿದ್ಯುತ್ ದೀಪ ಅಲಂಕಾರ ವ್ಯವಸ್ಥೆಯಡಿ ವಿಧಾನಸೌಧ ಕಟ್ಟಡಕ್ಕೆ ವರ್ಣರಂಜಿತ ಲೈಟಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎನ್ನಲಾಗಿದೆ.