ಇಂಗ್ಲೆಂಡ್ನ ಕಾರ್ನ್‌ವಾಲ್‌ನಲ್ಲಿ ಐತಿಹಾಸಿಕ ಬಾಹ್ಯಾಕಾಶ ಉಡಾವಣೆ ನಡೆದಾಗ ಬೃಹತ್ ಉಲ್ಕೆಯೊಂದು ಆಕಾಶದಲ್ಲಿ ಮಿನುಗಿತು. ಆಕಾಶವನ್ನು ಬೆಳಗಿದ ಭವ್ಯವಾದ ನೈಸರ್ಗಿಕ ವಿದ್ಯಮಾನವು ವೀಕ್ಷಕರನ್ನು ವಿಸ್ಮಯಗೊಳಿಸಿದೆ.
ಇಂಗ್ಲೆಂಡ್ನ ಮೆಟ್ ಆಫೀಸ್ ಟ್ವಿಟರ್‌ನಲ್ಲಿ ಉಲ್ಕಾಪಾತದ ಸುದ್ದಿಯನ್ನು ದೃಢಪಡಿಸಿದೆ ಮತ್ತು ಅದರ ದೃಶ್ಯಗಳನ್ನು ಹಂಚಿಕೊಂಡಿದೆ. ಲಂಡನ್, ಸಸೆಕ್ಸ್, ವಿಲ್‌ಶೈರ್, ಹ್ಯಾಂಪ್‌ಶೈರ್, ಡಾರ್ಸೆಟ್ ಮತ್ತು ಡೆವೊನ್ ಮೇಲೆ ಉರಿಯುತ್ತಿರುವ ಫೈರ್‌ಬಾಲ್ ಅನ್ನು ನೋಡಲಾಯಿತು ಎಂದು ಅದರಲ್ಲಿ ಹೇಳಲಾಗಿದೆ.
ಅನೇಕ ಟ್ವಿಟ್ಟರ್ ಬಳಕೆದಾರರು ತಮ್ಮ ಫೋನ್‌ಗಳಿಂದ ಅಥವಾ ಅವರ ಮನೆಯ ಹೊರಗಿನ ಭದ್ರತಾ ಕ್ಯಾಮೆರಾಗಳಿಂದ ರೆಕಾರ್ಡ್ ಮಾಡಿದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಜೀವಮಾನದಲ್ಲಿ ನೋಡದ ಅದ್ಭುತಗಳನ್ನು ನೋಡಿರುವುದಾಗಿ ಹಲವರು ಹೇಳುತ್ತಿದ್ದಾರೆ. ಇದನ್ನು ಮಿಸ್ ಮಾಡಿಕೊಂಡವರೆಲ್ಲಾ ಈಗ ವೈರಲ್ ವಿಡಿಯೋ ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.