ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಸೊಸೈಟಿಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿಸಿ ಪರಾರಿಯಾಗಿದ್ದಾರೆ. ಈ ಸಂಪೂರ್ಣ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಘಾಜಿಯಾಬಾದ್‌ನ ರಾಜೇಂದ್ರ ನಗರ ಎಕ್ಸ್‌ಟೆನ್ಶನ್‌ನಲ್ಲಿರುವ ಎಸ್‌ಜಿ ಗ್ರ್ಯಾಂಡ್ ಸೊಸೈಟಿಗೆ ಮಹಿಳೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ.
ವೀಡಿಯೊದಲ್ಲಿ, ಮಕ್ಕಳು ಸೊಸೈಟಿ ಆವರಣದಲ್ಲಿ ಆಟವಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಮಹಿಳೆ, ಮಗುವಿನ ಮೇಲೆ ಕಾರು ಹರಿಸಿದ್ದಾರೆ. ಮಗು ಕಾರಿನ ಚಕ್ರದ ಕೆಳಗೆ ಸಿಲುಕಿದ ನಂತರ, ವ್ಯಕ್ತಿಯೊಬ್ಬರು ಓಡಿಬಂದು ಮಗುವನ್ನು ಹೊರತೆಗೆದಿದ್ದಾರೆ. ಮಹಿಳೆ ಕೂಡ ಕಾರಿನಿಂದ ಹೊರಬಂದು ಮಗುವಿನ ಬಳಿಗೆ ಹೋಗಿದ್ದಾರೆ. ಆದರೆ, ಕೆಲವೇ ಸೆಕೆಂಡುಗಳಲ್ಲಿ, ಅವರು ಕಾರನ್ನು ಸ್ಟಾರ್ಟ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ನಂದಗ್ರಾಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೂಪೇಶ್ ವರ್ಮಾ ಎಂಬ ಟ್ವಿಟರ್ ಬಳಕೆದಾರರು ಮಹಿಳೆಯನ್ನು ಉಳಿಸಲು ಯಾರೋ ಗೇಟ್‌ನಲ್ಲಿರುವ ಪ್ರವೇಶ ನೋಂದಣಿಯ ಪುಟಗಳನ್ನು ಹರಿದಿದ್ದಾರೆ ಎಂದು ಆರೋಪಿಸಿದ್ದಾರೆ. ಮಗು ಸುರಕ್ಷಿತವಾಗಿದೆ ಎಂದು ವರದಿಯಾಗಿದೆ. ಆದರೆ, ಗಂಭೀರ ಗಾಯಗಳಾಗಿವೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಈ ವಿಷಯದಲ್ಲಿ ಪೊಲೀಸರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ.
@ghaziabadpolice कल शाम 4 बजे एसजी ग्रैंड में विजिटर महिला द्वारा एक बच्चे पे अपनी कार को चढ़ा के भाग गई। कुछ लोग इनको बचाने के लिए गेट एंट्री की रजिस्टर को फरवा दिया, अब इसका फुटेज मांगने पे AOA अधिकारी नहीं दे रहे है, जिससे FIR नहीं हो पाई। @dgpup @dm_ghaziabad @myogioffice pic.twitter.com/cd6q7i0F3I
— Rupesh Verma / रूपेश वर्मा (@rupeshjverma) February 25, 2025