ತಮ್ಮ ಮತ್ತೊಂದು ಪ್ರತಿಭೆ ಪ್ರದರ್ಶಿಸಿದ ಸಂಸದ ಶಶಿ ತರೂರ್ 07-09-2021 7:38AM IST / No Comments / Posted In: Latest News, India, Live News ಕಾಂಗ್ರೆಸ್ ಸಂಸದ ಶಶಿ ತರೂರ್ ತಮ್ಮ ಇಂಗ್ಲೀಷ್ ಭಾಷೆಯ ಮೇಲಿರುವ ಹಿಡಿತದ ಮೂಲಕವೇ ಹೆಚ್ಚು ಸುದ್ದಿಯಲ್ಲಿ ಇರ್ತಾರೆ. ಆದರೆ ಈ ಬಾರಿ ತಮ್ಮ ಹಾಡುಗಾರಿಕೆಯ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ರಂಜಿಸಿದ್ದಾರೆ. ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಮುಖ್ಯಸ್ಥರಾದ ತರೂರ್ ಶ್ರೀನಗರಕ್ಕೆ ಭೇಟಿ ನೀಡಿದ್ದು, ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ತಿರುವನಂತಪುರ ಸಂಸದ ಶಶಿ ತರೂರ್ ಬಾಲಿವುಡ್ನ ʼಎಕ್ ಅಜನಬಿ ಹಸೀನಾ ಸೆʼ ಹಾಡನ್ನು ಹಾಡಿದ್ದಾರೆ. ಇದು 1974ರಲ್ಲಿ ತೆರೆ ಕಂಡ ʼಅಜನಬಿʼ ಸಿನಿಮಾದ ಹಾಡಾಗಿದೆ. ಈ ವಿಡಿಯೋದಲ್ಲಿ ತರೂರ್ ಮೊಬೈಲ್ ಪರದೆಯಲ್ಲಿ ಹಾಡಿನ ಸಾಲುಗಳನ್ನು ನೋಡುತ್ತಾ ಹಾಡುತ್ತಿರೋದನ್ನು ಕಾಣಬಹುದಾಗಿದೆ. ಈ ಹಾಡನ್ನು ಮೂಲತಃ ಕಿಶೋರ್ ಕುಮಾರ್ ಹಾಡಿದ್ದಾರೆ. ಪ್ರೇಕ್ಷಕರು ಚಪ್ಪಾಳೆ ಮೂಲಕ ತರೂರ್ ಹಾಡಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಟ್ವಿಟರ್ನಲ್ಲೂ ಈ ಪೋಸ್ಟ್ ವೈರಲ್ ಆಗಿದೆ. After the cultural programme by Doordarshan Srinagar for the Parliamentary Standing Committee on Information Technology, I was persuaded to sing for the Members. Unrehearsed and amateur but do enjoy! pic.twitter.com/QDT4dwC6or — Shashi Tharoor (@ShashiTharoor) September 6, 2021