ಕೆಲವೇ ಕೆಲವು ದಿನಗಳ ಹಿಂದಿನ ಮಾತು. ಸಮುದ್ರದ ರಾಕ್ಷಸ ಅಲೆಗಳ ಮಧ್ಯದಿಂದ ತೇಲಿ ಬಂದಿತ್ತು ಚಿನ್ನದ ರಥ. ಹಾಗೆ ರಥ ತೇಲಿ ಬರೋದನ್ನ ನಾವು ಸಿನೆಮಾದಲ್ಲಿ ಮಾತ್ರ ನೋಡಿರಬಹುದು. ಆದರೆ ಇದು ಸಿನೆಮಾ ಅಲ್ಲ…… ವಾಸ್ತವದಲ್ಲಿ ನಡೆದ ಘಟನೆ. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುನ್ನಾಪಲ್ಲಿಯ ಕಡಲ ದಡದಲ್ಲಿ ಹೀಗೆ ತೇಲಿ ಬಂದಿತ್ತು ಬಂಗಾರದ ರಥ. ಇಡೀ ವಿಶ್ವವೇ ಈ ಒಂದು ದೃಶ್ಯವನ್ನ ನೋಡಿ ದಂಗಾಗಿ ಹೋಗಿತ್ತು.
70 ಸಾವಿರ ಮೌಲ್ಯದ 12 ಮೂಟೆ ನಿಂಬೆಹಣ್ಣು ಕದ್ದ ಖದೀಮರು
ಅಸಾನಿ ಚಂಡಮಾರುತದ ರೌದ್ರಾವತಾರಕ್ಕೆ ಸಮುದ್ರದ ಅಲೆಗಳು ಅಬ್ಬರಿಸ್ತಾ ಇತ್ತು. ಅದೇ ಸಮುದ್ರದ ಅಲೆಗಳ ನಡುವಿನಿಂದ ತೇಲಿ ಬಂದಿತ್ತು ಈ ಹೊನ್ನಿನ ರಥ. ಇದೇ ರಥದ ಬಗ್ಗೆ ಈಗ ನಾನಾ ಕಥೆಗಳು ಹುಟ್ಟಿಕೊಂಡಿವೆ. ಈ ರಥ ಬಂದಿದ್ದೆಲ್ಲಿಂದ….. ಇಲ್ಲಿಗೇಕೆ ಬಂತು…… ಇದನ್ನ ಯಾರಾದರೂ ಉದ್ದೇಶ ಪೂರಕವಾಗಿ ಕಳುಹಿಸಿದ್ದಾರಾ ಅನ್ನೊ ಹತ್ತು ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಅಸಲಿಗೆ ಈ ರಥ ತೇಲಿ ಬಂದಿರೋ ರೀತಿ ನೋಡ್ತಿದ್ರೇನೆ ಅನೇಕ ಅನುಮಾನಗಳು ಕಾಡುತ್ತೆ. ಕಾರಣ ಈ ರಥವನ್ನ ಖಾಲಿ ಡ್ರಮ್ಮ್‌ಗಳನ್ನ ಸೇರಿಸಿ ತೆಪ್ಪದ ರೀತಿ ಮಾಡಿ, ಅದರ ಮೇಲೆ ರಥವನ್ನ ತೇಲುವಂತೆ ಮಾಡಲಾಗಿದೆ. ಇನ್ನೂ ಈ ರಥದ ಕಂಬಿಗಳ ಮೇಲೆ 16-01-2022 ಅಂತ ಬರೆದಿರುವುದನ್ನ ಸಹ ಕಾಣಬಹುದಾಗಿದೆ. ಇದೆಲ್ಲವನ್ನ ಗಮನಿಸಿದ್ರೆ, ಯಾರೋ ಇದನ್ನ ಉದ್ದೇಶ ಪೂರಕವಾಗಿಯೇ ಮಾಡಿದ್ದಿರಬಹುದೇನೋ ಅಂತ ಅನಿಸುತ್ತೆ..
ಇನ್ನೂ ಚಿನ್ನದ ರಥ ಅಂತ ಹೇಳಲಾಗುತ್ತಿರೋ ಈ ರಥ. ಅಸಲಿಗೆ ಚಿನ್ನದ ರಥವೇ ಅಲ್ಲ..! ಇದು ಸ್ಟೀಲ್ ಲೋಹದ ರಥವಾಗಿದ್ದು, ಇದಕ್ಕೆ ಗೋಲ್ಡ್ ಕಲರ್‌ನ್ನ ಹಚ್ಚಲಾಗಿದೆ, ಅಂತ ಶ್ರೀಕಾಕುಳಂ ಜಿಲ್ಲೆ ತೆಕ್ಕಲಿಯ ಇನ್ಸ್ ಪೆಕ್ಟರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಬಹುಶಃ ಥೈಲ್ಯಾಂಡ್ ಅಥವಾ ಮಯನ್ಮಾರ್‌ನಿಂದ ತೇಲಿ ಬಂದಿರೋ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.