ಕಾಡು ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಎಂಟ್ರಿ ಕೊಡುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಮಾನವನ ಆವಾಸಸ್ಥಾನಗಳಿಗೆ ಈ ರೀತಿ ಕಾಡುಪ್ರಾಣಿಗಳು ನುಗ್ಗಿದ ಘಟನೆಗಳು ಹಲವಾರು ಬಾರಿ ಬೆಳಕಿಗೆ ಬಂದಿವೆ. ಇದೀಗ ಅಂತಹುದೇ ಘಟನೆಯೊಂದು ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.
ರೈತನೊಬ್ಬ ತನ್ನ ಭೂಮಿಯನ್ನು ಉಳುಮೆ ಮಾಡುತ್ತಿರುವಾಗ ಹಿಂದೆ ಹುಲಿಯೊಂದು ಹೊಲದಲ್ಲಿ ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರಾಜ್ ಲಖಾನಿ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಹುಲಿಯೊಂದು ಭತ್ತದ ಗದ್ದೆಯಲ್ಲಿ ಸುತ್ತಾಡುತ್ತಿರುವುದು ಕಂಡುಬಂದಿದೆ. ಗದ್ದೆಯಲ್ಲಿ ಈ ಹುಲಿ ಸ್ವಚ್ಛಂದವಾಗಿ ಸಂಚರಿಸುತ್ತಿರುವಾಗ, ಒಬ್ಬ ರೈತ ಟ್ರ್ಯಾಕ್ಟರ್‌ನಲ್ಲಿ ತನ್ನ ಜಮೀನನ್ನು ಉಳುಮೆ ಮಾಡುತ್ತಿರುವುದು ಸಹ ಬೆಳಕಿಗೆ ಬಂದಿದೆ. ಪಿಲಿಭಿತ್ ಜಿಲ್ಲೆಯ ಈ ರೈತ ಹೊಲವನ್ನು ಉಳುಮೆ ಮಾಡುತ್ತಿದ್ದಾರೆ. ಇವರ ಹೊಲದಲ್ಲಿ ಹುಲಿಯು ತಿರುಗಾಡುತ್ತಿದೆ. ಇನ್ನೊಬ್ಬ ರೈತ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ ಎಂದು ರಾಜ್ ಲಖಾನಿ ಪೋಸ್ಟ್‌ಗೆ ಕ್ಯಾಫ್ಸನ್ ನೀಡಿದ್ದಾರೆ.
ಈ ವೀಡಿಯೊ 1,20,000 ಕ್ಕೂ ಹೆಚ್ಚು ವ್ಯೂವ್ಸ್ ಮತ್ತು 2,000 ಕ್ಕೂ ಹೆಚ್ಚು ಲೈಕ್ ಪಡೆದಿದೆ. ನೆಟ್ಟಿಗರು ಈ ಪೋಸ್ಟ್‌ಗೆ ಕಮೆಂಟ್ ಸಹ ಮಾಡಿದ್ದು ಕೆಲವರು ಹುಲಿಯ ಗಾಂಭೀರ್ಯದ ನಡಿಗೆ ನೋಡಿ ಮೆಚ್ಚಿಕೊಂಡರೆ ಇತರರು ಪ್ರಾಣಿಗಳು ಮತ್ತು ಮನುಷ್ಯರು ಅಸ್ತಿತ್ವದಲ್ಲಿ ಇರುವುದನ್ನು ತೋರಿಸುವ ಪರಿಪೂರ್ಣ ಉದಾಹರಣೆ ಎಂದು ಬರೆದಿದ್ದಾರೆ.