ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲೆಂದು ಇರುವ ಜೀಬ್ರಾ ಕ್ರಾಸಿಂಗ್ ನಲ್ಲಿ ನಿಜವಾದ ಜೀಬ್ರಾ ಕ್ರಾಸ್ ಆಗಿದೆ.
ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿರುವ ಮೃಗಾಲಯದಿಂದ ತಪ್ಪಿಸಿಕೊಂಡ ಜೀಬ್ರಾ ಮೂರು ಗಂಟೆಗಳ ಕಾಲ ವಸತಿ ಪ್ರದೇಶದ ಬೀದಿಗಳಲ್ಲಿ ಅಲೆದಾಡಿತು. ನಂತರ ಅದನ್ನು ಸುರಕ್ಷಿತವಾಗಿ ಹಿಡಿದು ಮೃಗಾಲಯಕ್ಕೆ ಕರೆದೊಯ್ಯಲಾಯಿತು.
ರಸ್ತೆಯಲ್ಲಿ ಎಲ್ಲೆಂದರಲ್ಲಿ ನುಗ್ಗಿ ಓಡುತ್ತಿದ್ದ ಜೀಬ್ರಾ ಕಂಡ ಜನ ಬೆಚ್ಚಿಬಿದ್ರು. ಜೀಬ್ರಾ ಕ್ರಾಸಿಂಗ್ ಮಾಡ್ತಿದ್ದ ಜೀಬ್ರಾ ನೋಡಿದವರು ಇದು ನಿಜಕ್ಕೂ ಜೀಬ್ರಾ ಕ್ರಾಸಿಂಗ್ ಎಂದಿದ್ದಾರೆ.